ಸುದ್ದಿ9:ಬಜ್ಪೆ: ಪ್ರತಿಯೊಬ್ಬ ಮಕ್ಕಳಿಗೂ ಅಗಾಧವಾದ ಪ್ರತಿಭೆಯಿದೆ. ಅದನ್ನು ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಹೊರತರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಿತೇಶ್ ಶೆಟ್ಟಿ ಹೇಳಿದರು.
ಅವರು ಬಜ್ಪೆ ಸಮೀಪದ ಕರಂಬಾರು ಸರಕಾರಿ ಮಾದರಿ ಶಾಲೆಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ನಂತರ ಮಾತಾಡಿದ ಅವರು ಮಕ್ಕಳಲ್ಲಿ ಅನೇಕ ರೀತಿಯ ಪ್ರತಿಭೆ ಇದ್ದು ಅದು ಅವ್ಯಕ್ತವಾಗಿರುತ್ತದೆ. ಅದನ್ನು ಶಿಕ್ಷಕರು, ಹಾಗೂ ಹೆತ್ತವರು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಗತ್ಯ. ಪಠ್ಯ ಚಟುವಟಿಗಳಂತೆ ಪಠ್ಯೇತರ ಚಟುಚವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಮಾಡಿಕೊಂಡರೆ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಹಿತವಚನ ನೀಡಿದರು.
ಪ್ರತಿಭಾ ಕಾರಂಜಿಯಲ್ಲಿ ಬಜ್ಪೆ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಹತ್ತು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ ವೈಯಕ್ತಿಕ ಹಾಗೂ ಸಾಮೂಹಿಕ ನೆಲೆಯಲ್ಲಿ ವಿವಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು..
ಗಮನ ಸೆಳೆದ ಮಣ್ಣಿನ ಮೂರ್ತಿ ರಚನೆ: ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಮಣ್ಣಿ ಮೂರ್ತಿ ರಚನೆಯಲ್ಲಿ ತೊಡಗಿದ್ದರು. ಮಕ್ಕಳು ಮಣ್ಣಿನ ಕಲಾತ್ಮಕ ರಚನೆಗಳನ್ನು ಮಾಡಿಕೊಂಡು ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರಾದ ಜೋಕಿಂ ಡಿಕೋಸ್ತ, ಕಾಮ್ಗರೆಸ್ ವಲಯಾಧ್ಯಕ್ಷ ಜಗನ್ನಾತ್ ಸಾಲ್ಯಾನ್, ಯುವಕ ಮಂಡಲದ ಅಧ್ಯಕಜ್ಷರಾದ ಗಣೇಶ್ ಅರ್ಬಿ, ಗ್ರೇಷಿಯನ್ ಮತಾಯಿಸ್, ಮಳಲಿ ಸಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ಉಮೇಶ್, ಶಾಲಾ ಮುಖ್ಯೋಪಾಧ್ಯಾಯರಾ ಸುರೇಂದ್ರನಾಥ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿನಿ ನಿತ್ಯಾ ಪ್ರಾರ್ಥಿಸಿದರು. ಶಿಕ್ಷಕಿ ಪ್ರೇರಣಾ ಶೆಟ್ಟಿ ಸ್ವಾಗತಿಸಿದರು.

 

18(a)

18(b)

18(c)

18(d)

18(e)

18(f)

18(g)

18(h)

18(i)

18(j)

By suddi9

Leave a Reply

Your email address will not be published. Required fields are marked *