ಸುದ್ದಿ9: ಮುಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಕ್ಕಳಿಗೆ ಬೆಡ್ ಶಿಟ್ ವಿತರಣೆ; ಸಾರ್ವಜನಿಕ ಸೇವಾ ಸಂಸ್ಥೆ ಲಯನ್ಸ್ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಲಯನ್ಸ್ ಫೌಂಡೇಶನ್ ಸಹಕಾರದಿಂದ ಇನ್ನೂ ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಳ್ಲಲು ಸಾಧ್ಯವಾಗಿದೆ ಗ್ರಾಮೀಣ ಪ್ರದೇಶದ ಬಡ ಫಲಾನುಭವಿಗಳಿಗೆ ಸಹಕಾರಿಯಾಗಲು ಅಂತರಾಷ್ಟ್ರೀಯ ಲಯನ್ಸ್ ಫೌಂಡೇಶನ್ ಸಹಾಯ ಹಸ್ತ ನೀಡಿದ್ದು ಲಯನ್ಸ್ ಜಿಲ್ಲೆ 317ಡಿ ವ್ಯಾಪ್ತಿಯಲ್ಲಿ ಬರುವ 70 ಕ್ಲಬ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನನ್ನು ಗುರುತಿಸಿ ಸಹಾಯ ನೀಡಲಾಗುವುದು ಎಂದು ಲಯನ್ಸ್ ಗವರ್ನರ್ ಎಚ್.ಎಂ.ಮಂಜುನಾಥ ಮೂತರ್ಿ ಹೇಳಿದರು. ಭಾನುವಾರ ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಕ್ಕಳಿಗಾಗಿ ಬೆಡ್ಶೀಟ್ ವಿತರಿಸದ ಬಳಿಕ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು ವಹಿಸಿದ್ದರು. ಪ್ರಾಂಥ್ಯೀಯ ಅಧ್ಯಕ್ಷ ಹರೀಶ್ ಪುತ್ರನ್, ಜಿಲ್ಲಾ ಸಂಪುಟ ಸದಸ್ಯರಾದ ಅಶೋಕ್ ಕುಮಾರ್ ಮತ್ತು ಕೇಶವ ಪ್ರಸಾದ್ ಕಾರ್ಯದಶರ್ಿ ವಿಜಯ ಕುಮಾರ್ ಕುಬೆವೂರು, ಕೋಶಾಧಿಕಾರಿ ಎಂಪಿ ಕಾಮತ್ ಮತ್ತು ಮೂಲ್ಕಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

