ಕಾಸರಗೋಡು: ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಇದರ ತೃತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಾ.24 ಭಾನುವಾರ ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಉಚಿತ ರಕ್ತದಾನ ಶಿಬಿರ ನಡೆಯಲಿದೆ. ಉದ್ಯಾವರ ಮಾಡ ರಾಜ ಬೆಳ್ಚಪ್ಪಾಡ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.ಶಿಬಿರದ ಉದ್ಘಾಟಣೆಯನ್ನು ಕಾಸರಗೋಡು ಐ.ಪಿ.ಎಸ್,ಎ.ಎಸ್.ಪಿ ಶಿಲ್ಪಾ ದೇವಯ್ಯ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೈ ಶ್ರೀ ರಾಮ್‍ನ ಗೌರವ ಸಲಹೆಗಾರ ನ್ಯಾ.ಶ್ರೀ ನವೀನ್ ರಾಜ್ ಕೆ.ಜೆ ವಹಿಸಲಿದ್ದಾರೆ.

IMG-20190321-WA0008

ಮುಖ್ಯ ಅತಿಥಿಯಾಗಿ ಮುಂಬೈ ಶಂಕರ ಶೆಟ್ಟಿ ವಿರಾರ್ ಮತ್ತು ಸಿಐ ಮಂಜೇಶ್ವರ ಪೋಲಿಸ್ ಠಾಣೆಯ ಸಿಬಿ ಥೋಮಸ್, ಕುಂಜತ್ತೂರು ಕೃಷ್ಣ ಶಿವಕೃಪಾ, ಕೆ.ಎನ್ ಕೃಷ್ಣ ಭಟ್,ಚೇತನಾ.ಎಂ,ಆಯಿಷಾ ಪೆರ್ಲ,ನ್ಯಾ.ಶ್ರೀ ಶ್ರೀಕಾಂತ್,ಬಿ.ವಿ.ರಾಜನ್,ಕೆ.ಆರ್.ಜಯಾನಂದ,ಸುಬ್ಬಯ್ಯ.ರೈ,ಮೋಹನ್ ಶೆಟ್ಟಿ ಮಜ್ಜಾರು, ಕಿಶೋರ್ ನಾಯಕ್ ಗರೋಡಿ ಮಂಗಳೂರು, ಸಂಕಬೈಲ್ ಶ್ರೀ ಸತೀಶ್ ಅಡಪ್ಪ,ರಂಜಿತ್ ಗುರುಸ್ವಾಮಿ,ನರಸಿಂಹ ಕುಲಾಲ್ ಕಡಂಬಾರ್,ಮಂಜುನಾಥ ಅಡಪ್ಪ ಸಂಕಬೈಲ್,ನವೀನ್ ಬೆಂಗಳೂರು,ಪ್ರಸನ್ನ ಐತಾಳ್,ಎಡ್ವಾರ್ಡ್ ವಾಸ್, ಮಾಧವ್ ಉಳ್ಳಾಲ್,ಅಶ್ವಿನ್ ಕುಮಾರ್ ಬಂಗ್ರ ಮಂಜೇಶ್ವರ, ವೈಭವ್ ಶೆಟ್ಟಿ,ಸದಾಶಿವ ವರ್ಕಾಡಿ, ರಾಘವೇಂದ್ರ ಎಸ್ ಪೂಜಾರಿ, ಜಯ ಮಣಿಯಂಪಾರೆ, ರತನ್ ಕುಮಾರ್ ಹೊಸಂಗಡಿ, ಜಗದೀಶ್ ಪ್ರತಾಪ್ ನಗರ ಮುಂತಾದವರು ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಕಸರಗೋಡು ಜಿಲ್ಲೆ ಹಾಗು ದಕ್ಷಿಣ ಕನ್ನಡ ಜಿಲ್ಲೆಯ 45 ಸಮಾಜಮುಖಿ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಮಂಜೇಶ್ವರ ಜೈ ಶ್ರೀ ರಾಮ್ ಸೇವಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

IMG-20190321-WA0010

By Suddi9

Leave a Reply

Your email address will not be published. Required fields are marked *