ಕಾಸರಗೋಡು: ಎಪ್ಪತ್ತನೇ ವರ್ಷದ ಗಣರಾಜ್ಯೋತ್ಸವವನ್ನು ಜೇಸಿಐ ಪರ್ಕಳ ಘಟಕದ ವತಿಯಿಂದ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಆಚರಿಸಲಾಯಿತು. ಭಾರತೀಯ ಸೈನ್ಯದ ಯೋಧರಾದ ಶ್ರೀ ಕೃಷ್ಣಪ್ಪರವರು, ಜೇಸಿಐ ವಲಯ 15ರ  ಪ್ರಾಂತ್ಯ ‘ಸಿ ‘ ವಲಯ ಉಪಾಧ್ಯಕ್ಷ  ಜೇಎಫ್ಎಂ.ದೇವೇಂದ್ರ ಎಸ್. ನಾಯಕ್  ಮತ್ತು ವಲಯ ಸಂಯೋಜಕಿ ಜೇಸಿ ಎಚ್.ಜಿ.ಎಫ್ ಆಶಾ ಬಾಬು ರವರ ಗೌರವ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.

IMG-20190126-WA0018

ಘಟಕಾಧ್ಯಕ್ಷೆ ಜೇಎಫ್ಎಂ. ವಿನುತಾ ಸ್ವಾಗತಿಸಿದರು. ಯೋಜನಾಧಿಕಾರಿ ಜೇಸಿ ಅನಿಲ್ ರಾವ್ ಮತ್ತು ಜೇಜೆಸಿ ಸಂಯುಕ್ತ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಲ್ಲವಿ ಶೆಣೈ ವಂದಿಸಿದರು. ಕಾರ್ಯಕ್ರಮದ ಬಳಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.

By Suddi9

Leave a Reply

Your email address will not be published. Required fields are marked *