ಗುರುಪುರದ ಬಡಕರೆಯ ಶ್ರೀ ಕೋರ್ದಬ್ಬ ದೈವಸ್ಥಾನದಲ್ಲಿ ಇಂದು(ಫೆ. 23) ಕೋರ್ದಬ್ಬ ಮತ್ತು ಪರಿವಾರ ದೈವಗಳ ವಾರ್ಷಿಕ ಕೋಲೋತ್ಸವ ಜರುಗಲಿದೆ.
ಶನಿವಾರ ಬೆಳಿಗ್ಗೆ 11:30ಕ್ಕೆ ಭಂಡಾರಾಗಮನ, ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 10:30ಕ್ಕೆ ಕೋರ್ದಬ್ಬ ತನ್ನಿಮಾನಿಗ ದೈವಗಳಿಗೆ ಕೋಲ ಬಲಿ ಜರುಗಲಿದೆ. ಫೆ. 24ರಂದು ಸಂಜೆ 7:30ಕ್ಕೆ ಗುಳಿಗ-ಪಂಜುರ್ಲಿ ದೈವಗಳಿಗೆ ಹಾಗೂ ರಾತ್ರಿ 9:30ಕ್ಕೆ ರಾಹುಗುಳಿಗ ದೈವಕ್ಕೆ ಕೋಲ ಬಲಿ ನಡೆಯಲಿದೆ.
