ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವಿಟ್ಲ ವಲಯ ಇದರ ವಾರ್ಷಿಕೋತ್ಸವ ಮತ್ತು ಮಹಾಸಭೆಯು ವಿಟ್ಲ ವಲಯದ ಅಧ್ಯಕ್ಷ ಸಿ ರುಕ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಕೆಎಸ್ಟಿಎ ದ ಕ ಜಿಲ್ಲೆಯ ಮಾಜಿ ಅಧ್ಯಕ್ಷ ರಮೇಶ್ ಮಾಡೂರು, ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಈಶ್ವರ ಸಾಲಿಯಾನ್, ಕಾರ್ಯದರ್ಶಿ ನಾಗೇಶ್ ಮತ್ತು ಪುತ್ತೂರು ವಲಯದ ಜಯಂತ ಕುಮಾರ್ ಉರ್ಲಾಂಡಿ ಇವರು ಭಾಗವಹಿಸಿದ್ದರು. ವಿಟ್ಲ ವಲಯದ ಕೋಶಾಧಿಕಾರಿ ಮಲ್ಲಿಕಾ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘದ ಗೌರವ ಸಲಹೆಗಾರ ಸುಂದರ ಆಚಾರ್ಯ ನೆಗಳಗುಳಿ ಮತ್ತು ಕೆಪಿಟಿಸಿಎಲ್ ನ ನಿವೃತ್ತ ನೌಕರ ನಾಗರಾಜ ಇವರನ್ನು ಸನ್ಮಾನಿಸಲಾಯಿತು. ವಿಟ್ಲ ವಲಯದ ಮಾಜಿ ಅಧ್ಯಕ್ಷ ಡಾನ್ ಟೈಲರ್ ರವರನ್ನು ಗೌರವಿಸಲಾಯಿತು. ಅಧ್ಯಕ್ಷ ರುಕ್ಮ ಸಿ ಸ್ವಾಗತಿಸಿದರು. ಡಾನ್ ಟೈಲರ್ ವಂದಿಸಿದರು. ಕಾರ್ಯದರ್ಶಿ ರವಿಕುಮಾರ್ ವರದಿ ವಾಚಿಸಿದರು. ಕೃಷ್ಣಪ್ರಸಾದ್ ನೀರ್ಕಜೆ ನಿರೂಪಿಸಿದರು.
