ವಿಟ್ಲ: ಕಸ್ಬಾ ಗ್ರಾಮದ ಒಕ್ಕೆತ್ತೂರು ಇರಂದೂರಿನಲ್ಲಿ 600 ವರ್ಷಗಳ ಹಿಂದೆ ನಾಶಗೊಂಡು ಪುನಃ ಜೀರ್ಣೋದ್ಧಾರಗೊಳ್ಳಲಿರುವ ಇರಂದೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು  ಗುರುವಾರ  ನಡೆಯಿತು.

iranduru (2)

iranduru (3)ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ| ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಾರ್ಯಾಧ್ಯಕ್ಷ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ಧೇಶಕ ಚಂದ್ರಶೇಖರ ನೆಲ್ಯಾಡಿ, ಯೋಜನಾಧಿಕಾರಿ ಜಯಾನಂದ, ವೇದಮೂರ್ತಿ ಕುಂಟುಕುಡೇಲು ಗುರುರಾಜ ತಂತ್ರಿ, ವಿಟ್ಲ ಶ್ರೀಕೃಷ್ಣ ಧನ್ವಂತರಿ ಮಂದಿರದ ಜ್ಯೋತಿಷಿ ಕೇಶವ ಭಟ್, ಉದಯೇಶ ಕೆದಿಲಾಯ, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಮತ್ತು ಸತೀಶ್ ಆಳ್ವ ಇರಾ ಬಾಳಿಕೆ, ಅಧ್ಯಕ್ಷ ಸದಾಶಿವ ಆಚಾರ್ಯ ಕೈಂತಿಲ, ಸಂಚಾಲಕ ವೀರಪ್ಪ ಗೌಡ ರಾಯರ ಬೆಟ್ಟು, ಕಾರ್ಯದರ್ಶಿ ಯಂ ಕೆ ಕುಲಾಲ್, ಕೋಶಾಧಿಕಾರಿ ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಇತರ ಪದಾಧಿಕಾರಿಗಳು, ಸದಸ್ಯರು, ಶ್ರೀ ಲಕ್ಷ್ಮೀನರಸಿಂಹ ಸೇವಾ ಸಮಿತಿ, ಮಹಿಳಾ ಸೇವಾ ಸಮಿತಿ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *