ಸುದ್ದಿ9ಕಿನ್ನಿಗೋಳಿ; ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷಕಿನ್ನಿಗೋಳಿ , ರೋಟರಿ ಕ್ಲಬ್ಕಿನ್ನಿಗೋಳಿ , ರೋಟರಾ ಕ್ಟ್ ಕ್ಲಬ್ ಕಿನ್ನಿಗೋಳಿ ಇನರ್ ವೀಲ್ ಕಿನ್ನಿಗೋಳಿ, ಸೌತ್ ಕೆನರಾ ಪೋಟೋಗ್ರಾಪರ್ ಅಸೋಸಿಯೇಸನ್ ಮುಲ್ಕಿ ವಲಯ ಹಾಗೂ ಕಲ್ಕೂರ ಪ್ರತಿಷ್ಟಣಾ ಮಂಗಳೂರು ಇವರ ಸಂಯುಕ್ತ ಅಶ್ರಯದಲ್ಲಿ ಶ್ರೀ ಕ್ರಿಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕ್ರಷ್ಣ ಸ್ಪರ್ದೆಯು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಾರ್ಯ ಕ್ರಮದ ಉದ್ಘಟನೆಯನ್ನು ಕಟೀಲು ದೇವಳದ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಯಣ ಅಸ್ರಣ್ಣ ನೇರವೇರಿಸಿದರು ನಂತರ ಮಾತನಾಡಿದ ಅವರು ಮಕ್ಕಳು ಕ್ರಷ್ಣ ವೇಷದಾರಿಯಾಗ ಬಾರದು ಕ್ರಷ್ಣನಾಗಬೇಕು, ಕ್ರಷ್ಣನ ಅದರ್ಷಗಳನ್ನು ಮೈಗೂಡಿಸಬೇಕು ಅದ ತಾಯಂದಿಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ರೋತರಿಯ ಸಹಾಯಕ ಗವರ್ನರ್ ಸತೀಶ್ ಬೋಳಾರ್, ಕೊಡೆತ್ತೂರು ಭುವನಾಭಿರಾಮ ಉಡುಪ, ರೋಟರಿ ಕ್ಲಬ್ ಅದ್ಯೆಕ್ಷರಾದ ವಿಲಿಯಂ ಸಿಕ್ವೇರ, ಇನ್ನರ್ ವೀಲ್ ನ ವೀಣಾ ಬಾಲಕ್ರಷ್ಣ ಶೆಟ್ಟಿ,, ಪಿ. ಸತೀಶ್ ರಾವ್, ಮುಂತಾದವರು ಉಪಸ್ಥಿತರಿದ್ದರು, ಒಟ್ಟು ೪ ವಿಬಾಗಗಳಲ್ಲಿ ಸ್ಪರ್ದೆಯು ನಡೆದಿದ್ದು ನೂರಾರು ಮಖ್ಕಳು ಇದರಲ್ಲಿ ಬಾಗವಹಿಸಿದರು.



