ಮೂಡುಬಿದಿರೆ: ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ ಲೆಟ್ಸ್ ಟ್ರಾವೆಲ್ ಫ್ರೀ ಇದರ ಸಾಂಸ್ಕøತಿಕ ರಾಯಭಾರಿಯಾಗಿ ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿನಿ ಅಯನಾ ವಿ.ರಮಣ್ ಆಯ್ಕೆಯಾಗಿದ್ದಾರೆ. ಕಳೆದ ಜ24ರಂದು ಥಾಯ್ಲೆಂಡ್ ಬ್ಯಾಂಕಾಕಿನ ಬ್ಯಾಂಕಾಕ್ ಪ್ಯಾಲೇಸ್ ಸುಆಗತ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಿಇಒ ವಿಶ್ವಸಾರಥಿ ಡಾ. ನಾಗೇಶ ಕುಮಾರಧಾರ ಅವರು ಈ ಘೋಷಣೆ ಮಾಡಿದ್ದಾರೆ.

ayana raman
ಭಾರತೀಯ ಸಂಸ್ಕøತಿಯೊಂದಿಗೆ ವಿಶ್ವಪರ್ಯಟನೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಂಪೆನಿಯ ದೇಶವಿದೇಶಗಳ ಪ್ರವಾಸಗಳಲ್ಲಿ ಬಹುಮುಖೀ ಪ್ರದರ್ಶನ ನೀಡಿರುವ ಅಯನಾ ರಮಣ್ ಅವರಿಗೆ ರಜತ ಕಿರೀಟ, ಸಹಿತ ಕಂಪೆನಿಯ ಆಡಳಿತ ನಿರ್ದೇಶಕಿ ಆರತಿ ಸಮ್ಮಾನಿಸಿದರು.
ಮಹಾರಾಷ್ಟ್ರ ಪ್ರಾಂಚೈಸಿ ಮಾಲಕ ಪ್ರೊ. ಜಯವಂತ್ ಜಾಧವ್, ಸತಾರಾದ ಪ್ರೊ.ನಂದಕುಮಾರ್ ರಣಭಾರೆ ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ಕಾಶೀನಾಥ್ ಕುಂಬಾರ್, ದೀಪಕ್ ಶರ್ಮ ನೇಪಾಳ, ಕೆ.ವಿ.ರಮಣ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *