ನವ ದೆಹಲಿ: ನೆಹರು ಪ್ರಧಾನಿ ಯಾಗಿರುವಾಗ ಭಾರತದ ನಕಾಶೆಯಲ್ಲಿ ಆಗಿರುವ ತಪ್ಪನ್ನು ಸುಧಾರಿಸಲು ಆಡಳಿತಾ ಧಿಕಾರಿಗಳು ಈ ಪ್ರಸ್ತಾಪವನ್ನು ಮಂಡಿಸಿದ್ದರು; ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಇವರು ಆಗಸ್ಟ್ 2013ರಲ್ಲಿ ಸೋನಿಯಾ ಗಾಂಧಿಯ ಆದೇಶದಂತೆ ಅದನ್ನು ಸುಧಾರಣೆ ಮಾಡಲು ನಿರಾಕರಿಸಿದ್ದರು. ಕೇವಲ ನೆಹರೂರವರ ಹೆಸರಿಗೆ ಕಳಂಕ ಬರಬಾರದೆಂದು ಭಾರತದ ಅಷ್ಟು ದೊಡ್ಡ ಪ್ರದೇಶಕ್ಕೆ ಎಳ್ಳುನೀರು ಬಿಡುವಂತಹ ಕೃತ್ಯವು ಸೋನಿಯಾ ಗಾಂಧಿ, ಡಾ.ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ಸರಕಾರದಿಂದ ಆಗಿದೆ. ಈ ಮಾಹಿತಿಯನ್ನು ಸಂಡೇ ಗಾರ್ಡಿಯನ್ ಈ ದಿನಪತ್ರಿಕೆಯಲ್ಲಿ ಮಾಧವ ದಲಪತ ಇವರು ಪ್ರಕಾಶಿಸಿದ್ದಾರೆ.

