ಜಮ್ಮು: ಜಮ್ಮಕಾಶ್ಮೀರದಲ್ಲಿ ಭೀಕರ ಮಳೆಗೆ ಪ್ರವಾಹ ಉಂಟಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ನೆರವಿಗೆ ಧಾವಿಸಿದೆ. ಈಗಾಗಲೇ ಜಮ್ಮವಿನಲ್ಲಿ ಸೈನಿಕರೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಆರೆಸ್ಸೆಸ್ ಯುವಕರ ಉತ್ಸಾಹಿ ತಂಡ ಅಲ್ಲೇ ಬೀಡುಬಿಟ್ಟಿದ್ದು ಹಲವಾರು ಕೆಲಸಕಾರ್ಯಗಳನ್ನು ಮಾಡಿದೆ. ಸಂತೃಸ್ತರಿಗೆ ನೆರವಾಗುವುದು, ಔಷಧಿ ವಿತರಿಸುವುದು, ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವುದು, ರಸ್ತೆ ರಿಪೇರಿ, ಊಟದ ಸರಬರಾಜು, ಔಷಧಿ ವಿತರಣೆ, ಗಂಜೆಕೇಂದ್ರದ ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

rss (1)

rss (2)

rss (3)

rss (4)

rss (5)

ಈ ಕಾರ್ಯಕ್ರಮಕ್ಕೆ ಈಗಾಗಲೇ ಕಾರ್ಯಕರ್ತರು ನಿಧಿ ಸಂಗ್ರಹಿಸಿ ಅದನ್ನು ಸಂತೃಸ್ತರಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಯಾವುದೇ ಪ್ರಚಾರ ವಿಲ್ಲದೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ತಿಳಿದುಬಂದಿದೆ. ಸೈನಿಕರ ಜೊತೆಜೊತೆಯಾಗಿ ಕೆಲಸ ಮಾಡುತ್ತಿರುವುದರಿಂದ ಸೈನಿಕರೂ ಕೂಡಾ ತುಂಬಾ ಖುಷಿಪಟ್ಟಿದ್ದಾರೆ. ಮಳೆ ಸಂಪೂರ್ಣವಾಗಿ ನಿಂತು ಕಾಶ್ಮೀರ ಸಹಜ ಸ್ಥಿತಿಗೆ ಮರಳುವವರೆಗೆ ತನ್ನ ಕಾರ್ಯವನ್ನು ಮಾಡುವುದಾಗಿ ಆರೆಸ್ಸೆಸ್ ಹೇಳಿಕೊಂಡಿದೆ

By Suddi9

Leave a Reply

Your email address will not be published. Required fields are marked *