ಲಖ್ನೌ : ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವ ಲವ್ ಜಿಹಾದ್ ಬಗ್ಗೆ ಸುನ್ನಿ ಮೌಲ್ವಿಗಳ ಉತ್ತರ ಪ್ರದೇಶ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಲವ್ ಜಿಹಾದ್ ನಡೆಸುತ್ತಿರುವ ಮುಸ್ಲಿಮರು ಇಸ್ಲಾಂಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲವ್ ಜಿಹಾದ್ ಎಂಬ ಪದವನ್ನು ತಪ್ಪಾಗಿ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸುಳ್ಳು ಭರವಸೆಗಳಿಂದ ಅಮಾಯಕ ಹುಡುಗಿಯರನ್ನು ಆಕರ್ಷಿಸುವುದನ್ನುಇಸ್ಲಾಂನಲ್ಲಿ ನಿಷೇಧಿಸಲಾಗಿದೆ. ಆದರೂ ಇಂತಹ ಕೃತ್ಯಗಳಲ್ಲಿ ತೊಡಗಿರುವ ಮುಸ್ಲಿಮರು ಇಸ್ಲಾಂಗೆ ಘೋರ ಅನ್ಯಾಯವೆಸಗುತ್ತಿದ್ದಾರೆ ಎಂಬುದು ಸುನ್ನಿ ಮೌಲ್ವಿಗಳ ಗಂಭೀರ ಆರೋಪವಾಗಿದೆ. ಮುಸ್ಲಿಂ ತುವಕರು ಅನ್ಯಕೋಮಿನ ಯುವತಿಯರನ್ನು ಆಕರ್ಷಿಸಿ ಮತಾಂತರ ಮಾಡುತ್ತಿರುವುದನ್ನು ಖಂಡಿಸುವುದಾಗಿ ಸುನ್ನಿ ಮೌಲ್ವಿಗಳು ಹೇಳಿದ್ದಾರೆ.
ಲವ್ ಜಿಹಾದ್ ಎಂಬ ಪರಿಕಲ್ಪನೆ ಇಸ್ಲಾಂ ರ್ಮದಲ್ಲಿಲ್ಲ ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸುನ್ನಿ ಥಿಯಾಲಜಿ ಇಲಾಖೆ ಅಧ್ಯಕ್ಷ ಮುಫ್ತಿ ಜಾಹಿದ್ ಅಲಿ ಹಾಗೂ ಪ್ರೊಫೆಸರ್ ಎಂ.ಸಲೀಂ, ಜಂಟಿ ಹೇಳಿಕೆ ನೀಡಿದ್ದಾರೆ.
ಅನ್ಯಕೋಮಿನ ಯುವತಿಯರನ್ನು ಅಕರ್ಷಿಸುವಂತಹ ದಾರಿತಪ್ಪಿದ ವರ್ತನೆಯುಳ್ಳ ಯುವಕರನ್ನು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಕಠಿಣವಾಗಿ ಶಿಕ್ಷಿಸುತ್ತದೆ ಎಂದು ಸುನ್ನಿ ಮೌಲ್ವಿಗಳು ಹೇಳಿದ್ದಾರೆ.
