ನವದೆಹಲಿ: 2ಜಿ ತರಾಂಗತರ ಹಂಚಿಕೆ ಹಗರಣ ಸಂಬಂಧಿಸಿದ ಪ್ರಕರಣದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಕೈಬಿಡುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು ಎಂದು ನಿವೃತ್ತ ಸಿಎಜಿ ವಿನೋದ್ ರೈ ಹೇಳಿದ್ದಾರೆ.

manmoha

2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ಹಗರಣದ ಸಂಬಂಧಿಸಿದಂತೆ ನಡೆಸಲಾದ ಲೆಕ್ಕ ಪರಿಶೋಧನ ವರದಿಯಿಂದ ಮನಮೋಹನ್ ಸಿಂಗ್ ಅವರ ಹೆಸರು ಕೈಬಿಡುವಂತೆ ಕಾಂಗ್ರೆಸ್ ನಾಯಕರು ನನ್ನ ಮೇಲೆ ಭಾರಿ ಒತ್ತಡ ಹೇರಿದ್ದರು ಎಂದು ಅವರು ತಿಳಿಸಿದ್ದಾರೆ.
ನಾನು ಅನೇಕ ಬಾರಿ ಪ್ರಕರಣದ ಬಗ್ಗೆ ನಡೆಸಿದಾ ತನಿಖಾ ವರದಿಯಲ್ಲಿ ಮನಮೋಹನ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪಿಸಿದ್ದೆ. ಆದರೆ, ಅದನ್ನು ಕಾಂಗ್ರೆಸ್ ನಾಯಕರು ಪರಿಗಣನೆ ತೆಗೆದುಕೊಂಡಿಲ್ಲ. 2ಜಿ ಹಗರಣ ಸಂಬಂಧಿಸಿದಂತೆ ನಡೆದ ಪಿಎಸಿ ಸಭೆಯಲ್ಲಿ 2ಜಿ ಹಗರಣದ ಬಗ್ಗೆ ನ್ಯಾಯಯುತವಾಗಿ ವರದಿ ಸಲ್ಲಿಸಿದ್ದೆ.
ಕಾಂಗ್ರೆಸ್ನ 3-4 ಸಂಸದರು ವರದಿಯನ್ನು ಪರಿಶೀಲಿಸಿ ಮನಮೋಹನ್ ಸಿಂಗ್ ಅವರ ಹೆಸರನ್ನು ವರದಿಯಿಂದ ಕೈಬಿಡುವಂತೆ ಸೂಚಿಸಿದರು. ಪ್ರಸ್ತುತ ಅವರು ಕಾಂಗ್ರೆಸ್ ಎಂಪಿಗಳಾಗಿಲ್ಲ ಎಂದು ವಿನೋದ್ ರೈ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *