ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗಷ್ಟೇ ಸಲ್ಮಾನ್‌ಖಾನ್ ಅವರ ಎನ್‌ಜಿಒ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ತೊಟ್ಟಿದ್ದ ಬಟ್ಟೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

salman-khan-1

ಸರ್ಕಾರೇತರ ಸಂಸ್ಥೆ ಬೀಯಿಂಗ್ ಹ್ಯೂಮನ್ ಮೂಲಕ ಸಲ್ಮಾನ್ ಖಾನ್ ಅನೇಕ ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರು. ಇದೇ ಸಂಸ್ಥೆಯ ಮೂಲಕ ಫ್ಯಾಷನ್ ಶೋವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಮಾಡೆಲ್ ಒಬ್ಬರು ತೊಟ್ಟಿದ್ದ ಬಟ್ಟೆಯ ಮೇಲೆ ಇಸ್ಲಾಂ ವಿರೋಧಿ, ಮುಸ್ಲಿಂ ಜನಾಂಗದವರ ಭಾವನೆಗೆ ಧಕ್ಕೆ ತರುವ ವಾಕ್ಯಗಳಿತ್ತು ಎಂಬ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಮ್ಮದ್ ಅಸಿಮ್ ಹಾಗೂ ಮಹಮ್ಮದ್ ಆರೀಫ್ ಎಂಬುವರು ಸಲ್ಮಾನ್ ಖಾನ್ ಹಾಗೂ ಅವರ ಎನ್‌ಜಿಒ ವಿರುದ್ಧ ದೂರು ನೀಡಿದ್ದರು. ಈ ದೂರಿನನ್ವಯ ಸಲ್ಮಾನ್ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 295ಎ ಅನ್ವಯ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆ ಫ್ಯಾಷನ್ ಶೋ ನಡೆಸಿತ್ತು. ಇದರಲ್ಲಿ ರೂಪದರ್ಶಿ ಹಾಕಿಕೊಂಡಿದ್ದ ಟಿ-ಶರ್ಟ್ ಮೇಲೆ ಅರೇಬಿಕ್‌ನಲ್ಲಿ ಕೆಲವಾಕ್ಯಗಳನ್ನು ಬರೆಯಲಾಗಿತ್ತು. ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿದೆ ಹೀಗಾಗಿ ಖಾನ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ದಿಲೀಪ್ ಚವಾಣ್ ಹೇಳಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಫ್ಯಾಷನ್ ಶೋ ಕಾರ್ಯಕ್ರಮ ವಿಡಿಯೋ ಚಿತ್ರೀಕರಣದ ಸಿಡಿಯನ್ನು ದೂರುದಾರರು ನೀಡಿದ್ದು, ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

By suddi9

Leave a Reply

Your email address will not be published. Required fields are marked *