ಅದು 2005ನೇ ಇಸವಿ, ಜುಲೈ 28. ಸ್ಥಳ ಹೆಬ್ರಿಯ ಕಬ್ಬಿನಾಲೆ ಸಮೀಪದ ಮತ್ತಾವು. ಮತ್ತಾವಿನಲ್ಲಿ ನಕ್ಸಲರಿದ್ದಾರೆ ಎಂಬ ಮಾಹತಿ ಪೊಲೀಸ್ ಕಂಟ್ರೋಲ್ ರೂಂಗೆ ಹೊರಟಿತ್ತು.
ಈ ಮಾಹಿತಿನ್ನು ಆಧರಿಸಿ ಪೊಲೀಸರ ತಂಡವೊಂದು ಮತ್ತಾವುಕಡೆಗೆ ಕೂಂಬಿಂಗ್ ನಡೆಸಲು ಹೊರಟಿತ್ತು. ಅದು ಮತ್ತಾವಿಗೆ ಚಲಿಸುವ ಒಂದು ಅಡ್ಡರಸ್ತೆ. ಪೊಲೀಸ್ ಜೀಪ್ ಸಂಚರಿಸುತ್ತಾ ಇದೆ. ಆವಾಗ ಅಚ್ಚರಿಯೊಂದು ನಡೆಯಿತು.
ನೆಲದಲ್ಲಿ ಹುದುಗಿಸಿದ್ದ ಬಾಂಬ್ ಢಮಾರ್ ಎಂದು ಸಿಡಿಯಿತು. ಸ್ವಲ್ಪ ಹೊತ್ತಲ್ಲಿ ಗ್ರೇನೈಯ್ಡ್ ಒಂದು ತೋರಿಬಂದು ಜೀಪ್ಗೆ ತಗುಲಿದ ಪರಿಣಾಮ ಪೊಲೀಸ್ ಜೀಮ್ ಚಿಮ್ಮಿಬಿಟ್ಟಿತು. ಇದರಲ್ಲಿದ್ದ ಹಲವಾರು ಪೊಲೀಸರು ಗಾಯಗೊಂಡು ಆಸ್ಪತ್ರೆ ಸೇರುವಂತಾಯ್ತು. ಹೀಗೆ ಮತ್ತಾವು ಎಂಬ ಸಣ್ಣ ಹಳ್ಳಿ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿಯೇ ಬಿಟ್ಟಿತು.
ಹೌದು ಈ ಬಾಂಬ್ ಸ್ಫೋಟಿಸಿದ್ದು ಬೇರ್ಯಾರೂ ಅಲ್ಲ. ಪಶ್ಚಿಮಘಟ್ಟದ ತಪ್ಪಲಿನ ಮರೆಯಲ್ಲಿ ಕೂತು ಭಯಹುಟ್ಟಿಸುತ್ತಿರುವ ಕೆಂಪುಉಗ್ರರು. ನಕ್ಸಲ್ ನಿಗ್ರಹ ದಳದ ಪಡೆಗಳು ಕಬ್ಬಿನಾಲೆ ಮತ್ತಾವು ಸ್ಥಳದಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂಬ ಗೌಪ್ಯ ಮಾಹಿತಿ ಪಡೆದಿದ್ದ ನಕ್ಸಲರು ಉಪಾಯವಾಗಿ ನೆಲದಲ್ಲಿ ಬಾಂಬ್ ಹುದುಗಿಸಿಟ್ಟಿದ್ದರು. ಪೊಲೀಸ್ ತಂಡ ಈ ಪ್ರದೇಶಕ್ಕೆ ಬರುತ್ತಿದ್ದಂತೆ ದೂರದಲ್ಲಿ ಚಂದ ನೋಡುತ್ತಿದ್ದ ನಕ್ಸಲರು ರಿಮೋಟ್ ಕಂಟ್ರೋಲ್ನಲ್ಲಿ ಬಾಂಬ್ ಸಿಡಿಸಿ ನಾಳ್ವರು ಪೊಲೀಸರನ್ನು ಗಾಯಗೊಳಿಸಿದ್ದರು.

ಕೆಂಪು ಉಗ್ರರು ಬಾಂಬ್ ಸಿಡಿಸಿದ್ದು ಯಾಕೆ?
ನಕ್ಸಲರು ಬಾಂಬ್ ಸಿಡಿಸುವುದಕ್ಕೂ ಒಂದು ಕಾರಣವೂ ಇದೆ. ಕಬ್ಬಿನಾಲೆಯ ಗುಡ್ಡದಲ್ಲಿ ವಾಸಿಸುವ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಲು ಸರಕಾರ ಯೋಜನೆಯೊಂದನ್ನು ಸ್ಥಾಪಿಸಿಬಿಟ್ಟಿತು. ಇದರಿಂದ ಸ್ಥಳೀಯರು ಗಾಬರಿಬಿದ್ದರು. ಅಷ್ಟರಲ್ಲಿ ಒಮ್ಮಿಂದೊಮ್ಮೆಗೆ ಪ್ರತ್ಯಕ್ಷವಾದ ಯುವಕ ಯುವತಿಯ ತಂಡವೊಂದು ಕರಪತ್ರ ಹಂಚಿ ಸ್ಥಳೀಯರುಗೆ ಜಾಗ ಹೋಗದಂತೆ ಧೈರ್ಯ ತುಂಬಿದ್ದರು. ಅಲ್ಲಿಂದ ಕೆಲವೇ ಸಮಯದ ಅಂತರದಲ್ಲಿ ಮತ್ತಾವು ಸ್ಫೋಟಗೊಂಡಿತ್ತು.
ಹೆಬ್ರಿಯ ಮುದ್ರಾಡಿ ಗ್ರಾ.ಪಂಚಾಯತ್ಗೆ ಒಳಪಟ್ಟ ಮತ್ತಾವು ಮುದ್ರಾಡಿಯಿಂದ ಏಳು ಕಿ,.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ ಪ್ರದೇಶ. ಕಬ್ಬಿನಾಲೆಗೆ ಬಂದ ನಂತರ ನಾಲಕು ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿದರೆ ಮತ್ತಾವು ಟರ್ನ್ ಸಿಗುತ್ತದೆ. ಅಲ್ಲೊ ಮತ್ತಾವಿಗೆ ಹೋಗುವ ದಾರಿ ಎಂಬ ಬೋರ್ಡ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಸಂಚರಿಸಿದರೆ ಸೀತಾನದಿ ಹರಿಯುತ್ತದೆ. ಇಲ್ಲಿ ಮರದಲ್ಲಿ ತಯಾರಿಸಿದ ಅಪಾಯಕಾರಿ ಸೇತುವೆಯ ಮೇಲೆ ಸಂಚರಿಸಿದರೆ ಮತ್ತಾವು ಕಾಣಸಿಗುತ್ತದೆ.
ತೆರೆಯುತ್ತಿದೆ ನರಕಸದೃಶ್ಯ ಬದುಕು:
ಮತ್ತಾವಿನಲ್ಲಿ ದಲಿತ ಕುಟುಂಬಕ್ಕೆ ಸೇರಿದವರ 9 ಮನೆಗಳಿವೆ. ನಕ್ಸಲರೆಂದರೆ ಯಾರೆಂದೇ ಗೊತ್ತಿರದ ಅಲ್ಲಿನ ಜನರು ತೀರಾ ಸಹಜವಾದ ರೀತಿಯಲ್ಲಿ ಜೀವನ ಸಾಗಿಸುತ್ತಾರೆ. ಯಾವಾದರೂ ಸಾಮಗ್ರಿ ತರಬೇಕಾದರೆ 9 ಕಿಮೀ ದೂರದಲ್ಲಿರುವ ಮುದ್ರಾಡಿಗೆ ಹೋಗಬೇಕು. ಸಣ್ಣಪುಟ್ಟ ತಿನಿಸುಗಳು ಕಬ್ಬಿನಾಲೆಯ ಸಣ್ಣ ಸಣ್ಣ ಅಂಗಡಿಗಳಲ್ಲಿ ದೊರಕುತ್ತದೆ.
ಸ್ಫೋಟ ನಡೆದು 9 ವರ್ಷದ ಬಳಿಕ:
ಮತ್ತಾವಿನಲ್ಲಿ ಬಾಂಬ್ ಸ್ಫೋಟಗೊಂಡು 9 ವರ್ಷ ಸಂದಿದೆ. ಮತ್ತಾವಿಗೆ ತೆರಳುವ ರಸ್ತೆಯಲ್ಲಿ ಸೀತಾನದಿ ರಭಸವಾಗಿ ಹರಿಯುತ್ತದೆ. ಈ ನದಿಯನ್ನು ದಾಟಬೇಕಾದರೆ ಸೇತುವೆಯೊಂದು ನಿರ್ಮಾಣವಾಗಬೇಕಿತ್ತು. ಆದರೆ ಸ್ಥಳೀಯಾಡಳಿತ ಮಾತ್ರ ಇದುವರೆಗೂ ಸೇತುವೆ ನಿರ್ಮಿಸಿಲ್ಲ. ಇದರಿಂದ ಮನನೊಂದ ಜನತೆ ತಾವೇ ಸೇರಿಕೊಂಡು ಮರದ ಸೇತುವೆ ನಿರ್ಮಿಸಿದ್ದು ಅದರಲ್ಲೇ ಸಾಹಸಪಡುತ್ತಾ ಸಂಚರಿಸುತ್ತಿದ್ದಾರೆ. ಒಂಚೂರು ಆಯತಪ್ಪಿದ್ದರೂ, ನೀರಿಗೆ ಬಿದ್ದು ಸಾಯಬಹುದು.
ನಕ್ಸಲ್ ಪ್ಯಾಕೇಜ್ ಎಲ್ಲಿಗೆ ಹೋಗುತ್ತದೆ?
ಹೇಳಿಕೇಳಿ ನಕ್ಸಲ್ ಹೆಸರಲ್ಲಿ ಮತ್ತಾವು ಸುದ್ದಿಯಲ್ಲಿದೆ. ನಕ್ಸಲ್ ಪೀಡಿತರಿಗೆ ಸರಕಾರ ಪ್ಯಾಕೇಜ್ ಒದಗಿಸಿ ಅದನ್ನು ಅಭಿವೃದ್ಧಿ ಪಡಿಸುತ್ತದೆ. ಆದರೆ ಮನಸ್ಸು ಮಾಡಿದ್ದರೆ ಮತ್ತಾವುಗೆ ಸೇತುವೆ ತಯಾರಿಸಿ, ಮೂಲಸೌಕರ್ಯ ಒದಗಿಸಬಹುದಿತ್ತು. ಆದರೆ ಆಡಳಿತ ವರ್ಗ ಮನಸ್ಸೇ ಮಾಡಿಲ್ಲ. ಅಲ್ಲದೆ ನಕ್ಸಲ್ ಪ್ಯಾಕೇಜ್ ಎಲ್ಲಿಗೆ ಹೋಗಿದೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತದೆ.
ನಕ್ಸಲ್ ಗುಮ್ಮ ಹಬ್ಬಿಸುತ್ತಿರುವವರು ಯಾರು?
ಕಬ್ಬಿನಲೆಯಲ್ಲಿ ನಿಜವಾಗಿಯೂ ನಕ್ಸಲರು ಇದ್ದಾರೋ ಇಲ್ಲವೋ ಎಂದು ಯಾರಿಗೂ ಗೊತ್ತಿಲ್ಲ. ಹಳ್ಳಿಗರಿಂತೂ ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಆದರೆ ನಕ್ಸಲ್ ಬಗ್ಗೆ ಕೇಳೊದರೆ ಗೊತ್ತಿಲ್ಲ ಎನ್ನುತ್ತಾರೆ. ಹಾಗಾದರೆ ಇಲ್ಲಿ ನಕ್ಸಲ್ ಗುಮ್ಮ ಹರಡಿಸುತ್ತಿರುವವರು ಯಾರೆಂದೇ ತಿಳಿಯುತ್ತಿಲ್ಲ. ಯಾರೋ ಕೆಲವು ವ್ಯಕ್ತಿಗಳು ಬೇಕೆಂದೇ ನಿಗೂಢ ಲಾಭ ಗಳಿಸಲು ನಕ್ಸಲ್ ಗುಮ್ಮ ಹಬ್ಬಿಸುತ್ತಿರುವ ಸಾಧ್ಯತೆಯೂ ಇದೆ. ಯಾಕೆಂದರೆ ಮತ್ತಾವಿಗೆ ನಕ್ಸಲ್ ಪ್ಯಾಕೇಜ್ ಹೆಸರಲ್ಲಿ ಸಾಕಷ್ಟು ಹಣ ಬಂದಿರುವುದು ಕೂಡಾ ಇದಕ್ಕೆ ಕಾರಣವಿರಬಹುದು ಎಂಬ ಸಂಶಯ ನಮ್ಮನ್ನು ಕಾಡದಿರದು.
ಸ್ಥಳಿಯರನ್ನು ಕಾಡುತ್ತಿರುವ ಹುಲಿಯೋಜನೆ:
ಹೆಬ್ರಿಯ ಸುತ್ತಲಿನ ಪ್ರದೇಶದ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಹುಲಿಗಳನ್ನು ಬಿಟ್ಟು ಅವುಗಳ ಸಂತತಿಯನ್ನು ಬೆಳೆಸಲು ಹುಲಿಯೋಜನೆ ತಯಾರಿಸಲು ಸರಕಾರ ಸಿದ್ದವಾಗುತ್ತಿದ್ದು, ಇದರ ಬಗ್ಗೆ ಈಗ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಇದರಿಂದಾಗಿ ಇಲ್ಲಿ ಮತ್ತೆ ನಕ್ಸಲರ ಕಾರ್ಯಚಟುವಟಿಕೆ ಸಿದ್ದವಗುತ್ತಿದೆ ಎಂದು ಕೆಲವರು ಅಭಿಪ್ರಾಯಿಸುತ್ತಿದ್ದಾರೆ.
ಹೆಬ್ರಿ ಪೊಲೀಸರಿಗೆ ಸಂಶಯದ ಕಣ್ಣು:
ಸದಾ ಜನರನ್ನು ನಕ್ಸಲರ ಭಯದಲ್ಲಿ ತೇಲಾಡಿಸುತ್ತಿರುವ ಪೊಲೀಸರು ಹಾಗೂ ಇಲ್ಲಿನ ಸ್ಥಳೀಯ ಆಡಳಿತದವರು ಯಾರಾದರೂ ಅಪರಿಚಿತರ ಆಗಮಿಸಿದರೆ ಸದಾ ಸಂಶಯದಿಂದಲೇ ಕಾಣುತ್ತಾರೆ. ಕೆಲವು ದಿನಗಳ ಹಿಂದೆ ನಕ್ಸಲರು ಹೆಬ್ರಿಯ ಕಬ್ಬಿನಾಲೆಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಆಹಾರ ಸೇವಿಸಿ, ಹಣ ಸ್ವೀಕರಿಸಿ ಹೋಗಿದ್ದರೆಂದು ಸುದ್ದಿಯಾಗಿತ್ತು.
ಆದ್ದರಿಂದ ಪೊಲೀಸರು ಮಾತ್ರ ಯಾರಾದರೂ ಬ್ಯಾಗ್ ಜರ್ಕಾನ್ ಹಾಕಿಕೊಂಡು ಹೆಬ್ರಿಗೆ ಬಂದರೆ ನಮ್ಮನ್ನು ನೂರಾರು ಪ್ರಶ್ನೆಗಳಿಂದ ತಲೆ ತಿನ್ನುತ್ತಾರೆ. ಊರವರನ್ನು ಬೇಹುಗಾರಿಕೆಗೆ ಬಿಟ್ಟಂತೆ ವರ್ತಿಸುತ್ತಿರುವ ಇಲ್ಲಿನ ಪೊಲೀಸರಲ್ಲಿ ನಕ್ಸಲ್ ಬಗ್ಗೆ ಕೇಳಿದರೆ ಇದುವರೆಗೂ ನಕ್ಸಲರ ಯಾವ ಚಲನವಲನವೂ ಕಂಡುಬಂದಿಲ್ಲ ಎಂದು ಉತ್ತರಿಸುತ್ತಾರೆ.
ಸದ್ಯ ಹುಲಿಯೋಜನೆ ಬಂದಿರುವುದರಿಂದ ನಕ್ಸಲ್ ಗುಮ್ಮ ಹಬ್ಬಿದ್ದ ಕಾರಣ ಪೊಲೀಸರು ಇನ್ನಷ್ಟು ಅಲರ್ಟ್ ಆದಂತೆ ಕಾಣಿಸುತ್ತಿದೆ.
ಮೂಲ ಸೌಕರ್ಯದಿಂದ ವಂಚಿತರಾಗಿರುವ ಮತ್ತಾವು- ಕಬ್ಬಿನಾಲೆ ಪ್ರದೇಶವನ್ನು ಸಾಕಷ್ಟು ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಬೇಕು. ಮತ್ತಾವಿಗೆ ತೆರಳುವ ಪ್ರದೇಶದಲ್ಲಿರುವ ಮರದಲ್ಲಿ ಕಟ್ಟಲಾಗಿದ್ದ ಮರದ ಸೇತುವೆಯನ್ನು ಕೆಡವಿ ಹೊಸ ನೂತನ ಅತ್ಯಾಧುನಿಕ ಸೇತುವೆ ನಿರ್ಮಿಸಬೇಕು. ಇದನ್ನು ಮಾಡಲು ಸಾಧ್ಯವಾಗಿಸದ ನಕ್ಸಲ್ ಗುಮ್ಮ ಹಬ್ಬಿಸುತ್ತಲೇ ಇದ್ದಾರೆ.
ಗಿರಿ ಮಳಲಿ:
















