ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ತೃತೀಯ ವರ್ಷದ “ಅಹೋರಾತ್ರಿ ಏಕಾಹಾ ಭಜನಾಮಹೋತ್ಸವ”ವು ಡಿ.1ರಂದು ಶನಿವಾರ ಸೂರ್ಯೋದಯದಿಂದ ಮರುದಿನ ಭಾನುವಾರ ಸೂರ್ಯೋದಯದವರೆಗೆ ಹಾಗೂ ಭಾನುವಾರ ಸಂಜೆ “ಆನಂದಭಜನೆ” ಮತ್ತು 3ರಂದು ಸೋಮವಾರ ಸಂಜೆ ವಾರದ ಭಜನೆ ನಡೆಯಲಿದೆ ಎಂದು ಓಂಕಾರ ಅಖಿಲೇಶ್ವರ ಭಜನಾಮಂಡಳಿಯ ಪ್ರಕಟನೆ ತಿಳಿಸಿದೆ.
