ಗುರುಪುರ : ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೈದ ಗುರುಪುರ ಬಂಗ್ಲೆಗುಡ್ಡೆ ನಿವಾಸಿ ಇಲೆಕ್ಟ್ರೀಶಿಯನ್ ವೃತ್ತಿಯ ಶೇಖರ ಪೂಜಾರಿ(69) ಮೃತದೇಹ ಗುರುವಾರ ನೀರಿಂದ ಹೊರತೆಗೆಯಲಾಗಿ, ಕೈಕಂಬದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಇವರು ಬುಧವಾರ ಮಧ್ಯಾಹ್ನ ದೋಣಿಂಜೆಯಲ್ಲಿ ನದಿಗೆ ಹಾರಿದ್ದು, ಸತತ ಹುಡುಕಾಟದ ಬಳಿಕ ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಬಜ್ಪೆ ಪೊಲೀಸರು ಮಹಜರು ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
