ಸುದ್ದಿ9 ಕೈಕಂಬ: ಕೊಡ್ಮಾಣ್ ಶ್ರೀ ಶಾರದಾ ಪೂಜಾ ವೇದಿಕೆ ಇದರ ವತಿಯಿಂದ 26ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 1ರ ಬುಧವಾರದಿಂದ ಅಕ್ಟೋಬರ್ 4ರ ಶನಿವಾರದವರೆಗೆ ದ.ಕ.ಜಿಲ್ಲಾ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ ಎಂದು ವೇದಿಕೆಯ ಅಧ್ಯಕ್ಷರಾದ ಸುಧಾಮ ರೈ ಕೊಡ್ಮಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ದಿನಗಳಲ್ಲಿ ನವರಾತ್ರಿಯ ಪಾವಿತ್ರ್ಯತೆಯನ್ನು ಬಿಂಬಿಸುವ ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಯಾವಾಗ ಏನೇನು ಕಾರ್ಯಕ್ರಮಗಳು? 
ಆಕ್ಟೋಬರ್ 1, ಬುಧವಾರ:

ಶಾರದಾ ಪ್ರತಿಷ್ಠೆ, ಉದ್ಗಾಟನೆ, ಧ್ವಜರೋಹಣ, ಗಣಪತಿ ಹೋಮ, ಶ್ರೀ ಸೂಕ್ತಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಧಾರ್ನಿಕ ಸಭಾ ಕಾರ್ಯಕ್ರಮದಲ್ಲಿ ಸಾದ್ವಿ ಮಾತಾನಂದಮಯೀ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀಕ್ಷೇತ್ರ ನಡುಬೊಟ್ಟು ರವಿ ಎನ್. ಅವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ-ಗಾನ-ವೈಭವ, ಸ್ವಯಂವರ ಪಾರ್ವತಿಪೂಜೆ, ಹಾಗೂ “ತುಳುನಾಡ ವೈಭವ” ಎಂಬ ವಿಶೇಷ ಕಾರ್ಯಕ್ರಮ ಜರಗಲಿದೆ.

ಅಕ್ಟೋಬರ್ 2 ಗುರುವಾರ
ಈ ದಿನ ದುಗರ್ಾಹೋಮ, ಆಯುಧಪೂಜೆ, ಭಕ್ತಿ ಸುಧಾ, ರಂಗಾಪೂಜೆ ನಡೆಯಲಿದೆ. ಸಭಾಕಾರ್ಯಕ್ರಮದಲ್ಲಿ ಪೂಜ್ಯ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಚನ ನಡೆಯಲಿದೆ. ನಂತರ ಬ್ರಹ್ಮಷರ್ಿ ವಾಲ್ಮೀಕಿ-ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಅಕ್ಟೋಬರ್ 3 ಶುಕ್ರವಾರ
ಚಂಡಿಕಾಯಾಗ, ದಾಸವಾಣಿ, ಮೈಸೂರು ರಾಮಚಂದ್ರಾಚಾರ್ ಅವರಿಂದ ಭಕ್ತಿ ಸಂಗೀತ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ದುಗರ್ಾ ನಮಸ್ಕಾರಪೂಜೆ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಸುರೇಶ್ ಅತ್ತಾವರ ಅವರ “ಅಮರ್ ಬೊಳ್ಳಿಲು” {ಕೋಟಿ-ಚೆನ್ನಯ ) ನೃತ್ಯರೂಪಕ ನಡೆಯಲಿದೆ.

ಅಕ್ಟೋಬರ್ 4 ಶನಿವಾರ
ಅಕ್ಷರಾರಂಭಪೂಜೆ, ಲಕ್ಷ್ಮೀ ಹೃದಯ ಹೋಮ, ಭಕ್ತಿ ಸಂಗೀತ ರಸಮಂಜರಿ, ವಿಸರ್ಜನೋತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಕೊನೆಯಲ್ಲಿ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಪ್ರತೀದಿನ ಅನ್ನಸಂತರ್ಪಣೆ ನಡೆಯಲಿದೆ.

sharada

ಶ್ರೀ ಶಾರದಾ ಪೂಜಾ ವೇದಿಕೆಯಲ್ಲಿ ಸಂಯೋಜಕರಾಗಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಂತೋಷ್ ಕುಮಾರ್ ಕೊಡ್ಮಾಣ್, ನಾರಾಯಣ ಪಿ.ಕೆ., ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಸತೀಶ್ ನಾಯ್ಕ್ ಕೊಡ್ಮಾಣ್ಕೋಡಿ, ರವೀಂದ್ರ ನಾಯ್ಕ್ ಪೊನ್ನೋಡಿ, ಜಗದೀಶ್ ಕುಲಾಲ್ ಕಾಪಿಕಾಡ್, ಭಾಸ್ಕರ ಎಸ್., ವಿನೋದ್ ಕುಮಾರ್, ನಾರಾಯಾಣ ಟೈಲರ್ ಪೊಡಿಕಲ, ಹರೀಶ್ ಕಲ್ಲಜಾಲ್, ಭಾಸ್ಕರ ಬಂಗೇರಾ ಕೊಳಂಬೆ, ಕಾರ್ಯದಶರ್ಿ ಪೊನ್ನೋಡಿ ಯೋಗಿಶ್ ಕೋಟ್ಯಾನ್ , ಕೋಶಧಿಕಾರಿ ನವೀನ್ ಮರ್ಲ ಕೊಡಂಗೆ, ಸಹಕಾರ್ಯದಶರ್ಿಗಳಾದ ಜಲಂಧರ್ ಕುಲಾಲ್ ಏಪೆದಗುರಿ, ದಯಾನಂದ ಕಾಂಜಿಲಕೋಡಿ, ರೋಹಿತ್ ಕೊಟ್ಟಾರಿ ಕೊಡ್ಮಾಣ್ ಕೋಡಿ, ಚೇತನ್ ಕಾಂಜಿಲಕೋಡಿ, ಯೋಗೀಶ್ ಪೊನ್ನೋಡಿ, ಸಂತೋಷ್ ಹೊಗೆಗದ್ದೆ, ಪವನ್ ಕುಮಾರ್ ತಾರಿಪಡ್ಪು. ಉಪಾಧ್ಯಕ್ಷರುಗಳಾದ ಜಯಶ್ರೀ ಕೆ.ಎ., ಭವಾನಿ ಎ. ಆಳ್ವ ಪೊನ್ನೋಡಿ, ರವಿಕುಮಾರ್ ಅಬ್ಬೆಟ್ಟು, ಪುರುಷೋತ್ತಮ ಕುಲಾಲ್ ಕಾಪಿಕಾಡ್, ಯಶವಂತ ಕೋಟ್ಯಾನ್ ಪಕ್ಕೋಲಿಮಾರ್, ರವಿರಾಜ್ ಕೊಡಂಗೆ, ಚಂದ್ರಹಾಸ ಪೆಜೆತೊಟ್ಟು ಮೊದಲಾದವರು ಶ್ರೀಶಾರದಾಪೂಜಾ ವೇದಿಕೆಯ ಸೇವಾವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *