ಬಂಟ್ವಾಳ :ಯುವಜನತೆಗೆ ಧೈರ್ಯ, ಆತ್ಮವಿಶ್ವಾಸ, ಮಾನಸಿಕ ಸ್ಥಿರತೆ ಇದ್ದರೆ ಸಮಾಜ ಪ್ರಗತಿಯಾಗುತ್ತದೆ ಎಂದು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಭಟ್ ಹೇಳಿದರು.ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ‘ವ್ಯಕ್ತಿತ್ವ ವಿಕಸನ’ ಎಂಬ ವಿಷಯದ ಕುರಿತು ಮಾತನಾಡಿದರು.

DSC_0008

ವಿದ್ಯಾರ್ಥಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನದ ಜತೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ಯುವ ಜನತೆಗೆ ಪರಿಸರದ ಮೇಲೆ ಕಾಳಜಿ ಇರಬೇಕು. ಸಮೂಹ ಮಾಧ್ಯಮಗಳ ಉಪಯೋಗ ಮತ್ತು ದುರುಪಯೋಗದ ಬಗ್ಗೆ ಮನದಟ್ಟು ಮಾಡಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಎಸ್.ವಿ.ಎಸ್. ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು. ಮಾನವಿಕ ಸಂಘದ ಕಾರ್ಯದರ್ಶಿ ಲಿಖಿತಾ ಜಿ ಎನ್ ಉಪಸ್ಥಿತರಿದ್ದರು.  ವಿದ್ಯಾರ್ಥಿ ನಿಯಂತ್ ಆಚಾರ್ಯ ಕೆ. ಪ್ರಾರ್ಥಿಸಿದರು. ಮಾನವಿಕ ಸಂಘದ ಅಧ್ಯಕ್ಷೆ ಮತ್ತು ಇತಿಹಾಸ ಉಪನ್ಯಾಸಕಿ ಭಾರತಿ ಪಿ. ಸ್ವಾಗತಿಸಿದರು. ವಿದ್ಯಾರ್ಥಿ ಜ್ಯೊಯಿಲಸ್ ಅಲೆಕ್ಸ್ ಫೆರ್ನಾಂಡಿಸ್ ವಂದಿಸಿ, ವಿದ್ಯಾರ್ಥಿನಿ ಅನನ್ಯಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *