ಬಂಟ್ವಾಳ : ಎಮ್ ಸಿಸಿ ಬ್ಯಾಂಕ್ ಒಂದೇ ಸಮುದಾಯಕ್ಕೆ ಸೇವೆಯನ್ನು ನೀಡದೆ ಎಲ್ಲಾ ಸಮುದಾಯಕ್ಕೆ ಸೇವೆಯನ್ನು ನೀಡುತ್ತಿದ್ದು ಬ್ಯಾಂಕಿನ ಮೇಲೆ ನನಗೆ ತುಂಬಾ ಒಡನಾಟವಿದೆ. ಎಲ್ಲಾ ಸಮುದಾಯದ ಸಹಕಾರ ಮತ್ತು ಪ್ರೋತ್ಸಾಹ ದೊರಕಲಿ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು. ಅವರು ಎಮ್‍ಸಿಸಿ ಬ್ಯಾಂಕಿನ ನವೀಕೃತ ಬಿ.ಸಿ.ರೋಡ್ ಶಾಖೆ ಹಾಗೂ ಎಟಿಎಮ್ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕು ಎಲ್ಲಾ ಗ್ರಾಹಕರ ವಿಶ್ವಾಸವನ್ನು ಗಳಿಸಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ಅತಿವಂದನೀಯ ಮ್ಯಾಕ್ಸಿಂ ನೊರೋನ್ಹಾ ಆಶೀರ್ವಚಿಸಿದರು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಬ್ಯಾಂಕ್ ನೀಡುತ್ತಿರುವ ಸೇವೆ ಸೌಲಭ್ಯಗಳ ಬಗ್ಗೆ ವಿವರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯಕ್, ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶಕ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಕೆಥೋಲಿಕ್ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಬಿಆರ್‍ಆರ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಕ ಅಬ್ದುಲ್ ರಹಿಮಾನ್ ,ಮಹಾ ಪ್ರಬಂಧಕ ಸುನೀಲ್ ಮೆನೆಜಸ್, ನಿರ್ದೇಶಕರಾದ ಮೈಕಲ್ ಡಿಸೋಜ, ಡಿ.ಜೆ.ಪತ್ರಾವೋ ಉಪಸ್ಥಿತರಿದ್ದರು. ಶಾಖಾ ಉಸ್ತುವಾರಿ ನಿರ್ದೇಶಕ ಹೆರಾಲ್ಡ್ ಮೊಂತೆರೋ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಎಡ್ನಾ ನೊರೊನ್ಹಾ ವಂದಿಸಿದರು. ನಿರ್ದೇಶಕಿ ಐರಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.
