ಮುಂಬೈ: ಕುರ್ಲಾದ ಬಂಟರ ಸಂಘದ ಕಿರು ಸಭಾಗೃಹದಲ್ಲಿ ಭಾನುವಾರ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಜೀರ್ಣೋದ್ಧಾರದಂಗವಾಗಿ ಮುಂಬೈಯ ಗುರುಪುರ ಶ್ರೀ ಮುಂಡಿತ್ತಾಯ ದೈವ ವ್ಯಾಪ್ತಿಯ ಭಕ್ತರ ಸಭೆ ಕರೆಯಲಾಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ರೈ ದೋಣಿಂಜೆಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪುಣೆ ಇಂಬೋಸಿಸ್ ಕಾನೂನು ಮಹಾವಿದ್ಯಾಲಯದ ಡೀನ್ ಡಾ. ಶಶಿಕಲಾ ಗುರುಪುರ, ಉಷಾ ಶೆಟ್ಟಿ ಕಾರಮೊಗರುಗುತ್ತು, ರಮೇಶ ಶೆಟ್ಟಿ ತೋಡಾರು ಹಾಗೂ ಮುಂಬೈ ಸಮಿತಿಯ ವಸಂತ ರೈ ಗುರುಪುರ, ಸತೀಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರರ್ಸ್), ಸತೀಶ್ ಶೆಟ್ಟಿ ಕಾರಮೊಗರುಗುತ್ತು ಪನ್ವೇಲ್, ಮೋಹನದಾಸ ಶೆಟ್ಟಿ ಗುರುಪುರ, ಪ್ರಮೋದ್ ಶೆಟ್ಟಿ ದೋಣಿಂಜೆಗುತ್ತು, ದೇವಿಪ್ರಸಾದ್ ಶೆಟ್ಟಿ ದೋಣಿಂಜೆಗುತ್ತು, ಮುತ್ತಣ್ಣ ಅಡಪ ಬೆಳ್ಳಿಬೆಟ್ಟುಗುತ್ತು, ಪ್ರಸಾದ್ ಶೆಟ್ಟಿ ದೋಣಿಂಜೆಗುತ್ತು, ರೋಹಿತ್ ಶೆಟ್ಟಿ ಬೊಳ್ಳೂರುಗುತ್ತು ಹಾಗೂ ಊರ ಭಕ್ತರು ಭಾಗವಹಿಸಿದ್ದರು.
