gurunath
ಮುಂಬೈ: ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ವಿಚಾರಣೆ ನಡೆಸಿದ ಜಸ್ಟಿಸ್ ಮುದ್ಗಲ್ ನೇತೃತ್ವದ ಸಮಿತಿಯು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವುದಾಗಿ ತೀಪರ್ು ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಗುರುತಿಸಿಕೊಂಡಿದ್ದ ಗುರುನಾಥ್ ಬೆಟ್ಟಿಂಗ್ ನಡೆಸಿರುವುದು ಸಾಬೀತಾಗಿದೆ ಆದರೆ ಸ್ಪಾಟ್ ಫಿಕ್ಸಿಂಗ್ನಲ್ಲಿ ಶಾಮೀಲಾಗಿರುವ ಬಗ್ಗೆ ಮತ್ತಷ್ಟು ತನಿಖೆ ನಡೆಸುವ ಅವಶ್ಯಕತೆಯಿದೆ ಎಂದು ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯಸ್ಥ ರಾಜ್ ಕುಂದ್ರಾ ಕೂಡಾ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬುದಾಗಿ ಸಮಿತಿ ಹೇಳಿದೆ. ತಪ್ಪಿತಸ್ಥರಿಗೆ ಶಿಕ್ಷೆಯನ್ನು ಸವರ್ೋಚ್ಛ ನ್ಯಾಯಲಯವೇ ಪ್ರಕಟಿಸಲಿದೆ ಎಂದು ಮಾಜಿ ನ್ಯಾಯಾಧೀಶರಾದ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ತಿಳಿಸಿದೆ. ಹಿರಿಯ ಆಟಗಾರರಾದ ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಮತ್ತಿತರರು ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ಗಳ ಮಾರಕತೆಯ ಬಗ್ಗೆ ಯುವ ಆಟಗಾರರಿಗೆ ಸಲಹೆ ನೀಡಬೇಕೆಂದು ತನ್ನ ತೀಪರ್ಿನಲ್ಲಿ ಸಮಿತಿ ಸೂಚಿಸಿದೆ.

By suddi9

Leave a Reply

Your email address will not be published. Required fields are marked *