ಕೊಚ್ಚಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರ ಪಾಲಿಗೆ ರಾಕ್ಷಸ ಎಂದು ವಿರೋಧಿಗಳು ಜರಿಯುತ್ತಿರುವ ಬೆನ್ನಲ್ಲೇ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕೇರಳದ ಕ್ರಿಶ್ಚಿಯನ್ ಸಮುದಾಯ ಶ್ಲಾಘನೆ ವ್ಯಕ್ತಪಡಿಸಿ, ಜ್ಯಾಕೋಬೈಟ್ ಸಿರಿಯನ್ ಮತ್ತು ಮಲಂಕಾರಾ ಚರ್ಚ್’ನ ಧರ್ಮಗುರುಗಳು ಮೋದಿಗೆ ಬೆಂಬಲ ವ್ಯಕ್ತಪಡಿಸಿವೆ.
ಮೋದಿ ವಿಷಯದಲ್ಲಿ ನಮ್ಮ ತಕರಾರು ಇಲ್ಲ. ಗುಜರಾತ್’ನಲ್ಲಿರುವ ನಮ್ಮ ಸಮುದಾಯದವರು ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ… ಮೋದಿ ಆಡಳಿತದಲ್ಲಿ ಗುಜರಾತ್’ನಲ್ಲಿ ಒಳ್ಳೆಯ ಅಭಿವೃದ್ಧಿಯಾಗಿದೆ ಎಂದು ಕೇರಳ ಕ್ರೈಸ್ತರು ಹೇಳಿರು
ಇದೇ ವೇಳೆ, ದೆಹಲಿಯಲ್ಲಿ ಕಟ್ಟುನಿಟ್ಟು ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಕೆ.ಜೆ.ಆಲ್ಫೋನ್ಸ್ ಎಂಬುವವರೂ ಮೋದಿಯನ್ನ ಹೊಗಳಿದ್ದಾರೆ. “ಬಡವರು ಮತ್ತು ಶೋಷಿತರ ಉದ್ಧಾರವೆಂದರೆ ಹಾಗೂ ಒಳ್ಳೆಯ ಆಡಳಿತವೆಂದರೆ ಚರ್ಚ್’ಗೆ ಇಷ್ಟ. ನಮ್ಮ ಪ್ರಧಾನಿ ಅಭ್ಯರ್ಥಿ ಕೂಡ ಅದೇ ಕೆಲಸ ಮಾಡುತ್ತಿದ್ದಾರೆ” ಎಂದು ಆಲ್ಫೋನ್ಸ್ ಹೇಳಿದ್ದಾರೆ.

