ಚೆನ್ನೈ: ಅಶ್ಲೀಲ ಚಿತ್ರಗಳಲ್ಲಿ ನಟಿಸುವಂತೆ ಬಲವಂತ ಪಡಿಸುತ್ತಿದ್ದ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ ಚಿತ್ರ ನಟಿ ಶ್ರುತಿ ಚಂದ್ರಲೇಖಾ ಸೇರಿದಂತೆ ಐವರು ಆರೋಪಿಗಳನ್ನು ಚೆನ್ನೈ ಪೊಲೀಸರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳಲ್ಲಿ ಅಭಿನಯಿಸುವಂತೆ ಶ್ರುತಿಯ ಪತಿ ಎಸ್. ರೊನಾಲ್ಡ್ ಪೀಟರ್ ಪ್ರಿಂಜೋ(35) ಬಲವಂತಪಡಿಸಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದೆ. ದ್ವಿಭಾಷೆಗಳಲ್ಲಿ ನಟಿಸಿರುವ ಶ್ರುತಿ ಇಬ್ಬರು ಸಹಚರರ ಜತೆ ರೊನಾಲ್ಡ್ ಕೊಲೆ ಮಾಡಿ ಐವರ ಸಹಾಯದಿಂದ ತಿರುನಲ್ವೇಲಿ ಜಿಲ್ಲಿಯೆ ಪಲಯಂಕೊಟ್ಟೈ ಎಂಬಲ್ಲಿ ಶವವನ್ನು ಹೂತು ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಶ್ರುತಿ ಸಹಚರರಾದ ಪ್ರಿನ್ಸನ್, ಗಾಂಧಿಮತಿನಾಥನ್, ವಿಜಯ್, ವಿನೋದ್ ನಿರ್ಮಲ್ ಹಾಗೂ ರಫೀಕ್ ಎಂಬವವರನ್ನು ಹತ್ಯೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಬಂಧಿಸಿದ್ದರು. ಉಮಾಚಂದ್ರನ್ ಹಾಗೂ ಎಲಿಸಾ ಎಂಬುವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಎರಡೇರಡು ಮದುವೆಯಾಗಿದ್ದ ಶುತ್ರಿ ಮೊದಲು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು, ನಂತರ ಆತನಿಂದ ದೂರವಾಗಿ ಬಳಿಕ ಸೇಲಂನಲ್ಲಿ ಉದ್ಯಮಿ ರೊನಾಲ್ಡ್ ಪರಿಚಯವಾಗಿತ್ತು. ರೊನಾಲ್ಡ್‌ಗೆ ಅದಾಗಲೇ ಸೋನಾ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಬಳಿಕ ಶ್ರುತಿ, ರೊನಾಲ್ಡ್ ಮದುರವೊಯಲ್‌ನಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ರೊನಾಲ್ಡ್ ತನ್ನ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸುತ್ತಿದ್ದ. ತನಗಾದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಅಶ್ಲೀಲ ಚಿತ್ರಗಳನ್ನು ನಿರ್ಮಿಸಲು ನಿರ್ಧರಿಸಿದ ರೊನಾಲ್ಡ್ ಅದರಲ್ಲಿ ನಟಿಸುವಂತೆ ಶ್ರುತಿ ಮೇಲೆ ಒತ್ತಡ ಹೇರುತ್ತಿದ್ದ.
ಅಷ್ಟೇ ಅಲ್ಲದೆ ಆತ ಸಿನಿಮಾಕ್ಕಾಗಿ ಸಾಮೂಹಿಕಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಬಲವಂತ ಮಾಡತೊಡಗಿದಾಗ ನಾನು ಬಲವಾಗಿ ನಿರಾಕರಿಸಲಾರಂಭಿಸಿದೆ ಎಂದ ತನಿಖಾಧಿಕಾರಿಗಳಿಗೆ ಶ್ರುತಿ ಚಂದ್ರಲೇಖಾ ಹೇಳಿದ್ದಾರೆ.ಈ ನಡುವೆ ಬೆಂಗಳೂರು ಪ್ರವಾಸಕ್ಕೆ ಹೋಗಿದ್ದ ರೊನಾಲ್ಡ್ ವಾಪಸ್ ಬರುವಷ್ಟರಲ್ಲಿ ಶ್ರುತಿ ಕೊಲೆಯ ಸಂಚು ಸಿದ್ಧವಾಗಿತ್ತು. ಇದಕ್ಕಾಗಿ ಉಮಾಚಂದ್ರನ್ ಹಾಗೂ ಪ್ರಿನ್ಸನ್‌ರ ನೆರವು ಪಡೆಯಲು ನಿರ್ಧರಿಸಿದಳು.
ಹಾಲಿನಲ್ಲಿ ವಿಷ ಹಾಕಿ ಕೊಲೆ ಮಾಡಿದ ಮೂವರು ಆರೋಪಿಗಳು ಬಳಿಕ, ಶವವನ್ನು ಇನ್ನೈವರು ಆರೋಪಿಗಳ ಸಹಾಯದಿಂದ ಹೂತು ಹಾಕಿದ್ದರು. ಬಳಿಕ ರೊನಾಲ್ಡ್ ಮನೆಯಲ್ಲಿದ್ದ 75 ಲಕ್ಷ ರು. ನಗದು ಹಾಗೂ ಅಮೂಲ್ಯ ವಸ್ತುಗಳನ್ನು ಆರೋಪಿಗಳು ಹೊತ್ತೊಯ್ದಿದ್ದರು ಎಂದು ತನಿಖಾಧಿಕಾರಿ ಹೇಳಿದ್ದಾರೆ.