ಬೆಂಗಳೂರು: ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣದ ಹಿನ್ನೆಲೆ ವಿಚಾರಣೆಗೆ ಹಾಜರಾಗದ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ.3 ಅವರ ಬಂಧನಕ್ಕೆ ವಿಧಿಸಿದ್ದ ಗಡು ಮುಗಿದಿದ್ದು, ಇಂದು ಯಾವ ಕ್ಷಣದಲ್ಲಿ ಬೇಕಾದರೂ ಬಂಧನವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಆದರೆ ಕಾರ್ತಿಕ್ ಗೌಡ ಬೆಂಗಳೂರಿನ ಸೆಷನ್ ಕೋಟರ್್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆಗೆ ಬರಲಿದೆ. ಕೋರ್ಟ್ ಜಾಮೀನು ಆದೇಶವನ್ನು ಕೈಗೆತ್ತಿ ವಿಚಾರಣೆ ನಡೆಸಿದರೆ ತನ್ನ ತೀರ್ಮಾನಂದೆ ಕಾರ್ತಿಕ್ನನ್ನು ಬಂಧೀಸದೇ ಇರಲು ಅವಕಾಶ ಇರುತ್ತದೆ.
ಕಾರ್ತಿಕ್ ಗೌಡಗೆ ಬಂಧನದ ವಾರಂಟ್ ಜಾರಿ ಮಾಡುವಂತೆ ಆರ್ ಟಿ ನಗರದ ಪೊಲೀಸರು ಬೆಂಗಳೂರಿನ 8ನೇ ಎಪಿಎಂಸಿ ಕೋರ್ಟಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟು ಬಂಧನದ ವಾರಂಟ್ ಜಾರಿ ಮಾಡಿತ್ತು.
ಕಾರ್ತಕ್ ಮೇಲೆ ಐಸಿಸಿ ಸೆಕ್ಷನ್ 420 ಹಾಗೂ 376ರ ಅಡಿ ಕೇಸ್ ದಾಖಲಾಗಿದೆ

