ಹೈದರಾಬಾದ್: ತೆಲುಗು ನಟಿ ಶ್ವೇತಾ ಬಸು ಪ್ರಸಾದ್(23) ವೇಶ್ಯಾವಾಟಿಕೆ ಜಾಲದಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು, ಈ ಕೃತ್ಯಕ್ಕೆ ತೊಡಗಲು ಕಾರಣವೇನೆಂಬುವುದರ ಬಗ್ಗೆ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಹಣದ ಅವಶ್ಯಕತೆ ತುಂಬಾ ಇತ್ತು. ಅದರ ದುರುಪಯೋಗಪಡಿಸಿಕೊಂಡ ಕೆಲವು ದುಷ್ಟಶಕ್ತಿಗಳು ನನ್ನನ್ನು ವೇಶ್ಯಾವಾಟಿಕೆ ಕೂಪದಲ್ಲಿ ತಳ್ಳಿವೆ. ನಾನೇನು ಬಯಸಿ ಬಯಸಿ ಈ ಜಾಲದಲ್ಲಿ ಸಿಲುಕಿಲ್ಲ. ನನ್ನ ವೃತ್ತಿ ಬದುಕಿನಲ್ಲಿ ಕೆಲವು ಒಳ್ಳೆ ಚಿತ್ರಗಳನ್ನು ಮಾಡಿದ್ದೇನೆ. ಕೆಲ ಕೆಟ್ಟ ಆಯ್ಕೆಗಳನ್ನು ಮಾಡಿಕೊಂಡಿದ್ದೇನೆ, ಕೈಯ್ಯಲ್ಲಿ ಹಣ ಇಲ್ಲದಾಗ ನನ್ನ ಕುಟುಂಬ ಹಾಗೂ ಇನ್ನಿತರ ಒಳ್ಳೆ ಕಾರ್ಯಕ್ಕೆ ಹಣ ಬಳಸಲು ನನಗೆ ನೆರವು ಬೇಕಿತ್ತು. ಈ ಸಮಯದಲ್ಲಿ ಹಿತೈಷಿಗಳೆನಿಸಿಕೊಂಡಿದ್ದ ಕೆಲವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳು ಹೆಚ್ಚಿನ ಲಾಭ ಸಿಗುತ್ತದೆ. ಯಾರಿಗೂ ತಿಳಿಯದಂತೆ ಸ್ಟಾರ್ ಹೋಟೆಲ್ಗಳಲ್ಲಿ ವ್ಯವಹಾರ ಮುಗಿಸಬಹುದು ಎಂದು ಸಲಹೆ ನೀಡಿದರು. ನಾನು ಬೇರೆ ಯಾವುದೇ ದಾರಿ ತಿಳಿಯದಂತಾಗಿ ಈ ಕೂಪದಲ್ಲಿ ಸಿಲುಕಿದ ಮೀನನಂತೆ ಒದ್ದಾಡುತ್ತಿದ್ದೇನೆ ಎಂದು ಶ್ವೇತಾ ಹೇಳಿಕೊಂಡಿದ್ದಾಳೆ.
ಹೈದರಾಬಾದಿನ ಬಂಜಾರ ಹಿಲ್ಸ್ನ ಸ್ಟಾರ್ ಹೋಟೆಲ್ ಹಯಾತ್ನ ರೂಮ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುವಾಗ ಶ್ವೇತಾ ಬಸು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಳು


.