ಕೈಕಂಬ: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು, ತನ್ನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಬೇಕು. ಮಕ್ಕಳು, ಹೆತ್ತವರು ಮತ್ತು ಶಿಕ್ಷಕರಿಗೆ ಅವಿಭಾಜ್ಯ ಸಂಬಂಧವಿದೆ. ಇವರೆಲ್ಲ ಪ್ರಯತ್ನದಿಂದ ಮಕ್ಕಳು ಉತ್ತಮನಾಗರಿಕರಾಗುತ್ತಾರೆ ಎಂದು ಪೊಂಪೈ ಮಾತೆ ದೇವಾಲಯದ ಧರ್ಮಗುರು ವಂದನೀಯ ಆ್ಯಂಟನಿ ಲೋಬೋ ನುಡಿದರು.ಅವರು ಇತ್ತೀಚೆಗೆ ಗುರುಪುರ ಪೊಂಪೈ ಸಭಾಭವನದಲ್ಲಿ ನಡೆದ ಕಥೊಲಿಕ್ ಸಭಾ ಹಾಗೂ ಗುರುಪುರ ಘಟಕ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.19vp prathibhapuraskara

ಮುಖ್ಯ ಅತಿಥಿಯಾಗಿ ಆಗಮಿಸಿದ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷರಾದ ರೊಲ್ಫಿ ದಿ’ಕೋಸ್ಟಾ ಮಾತನಾಡಿ, ಮಕ್ಕಳು ತಮ್ಮ ಭವಿಷ್ಯ ರೂಪಿಸುವುದರ ಜೊತೆಗೆ ಸಮಾಜಕ್ಕೆ ತಮ್ಮ ಕೊಡುಗೆ ನೀಡಲು ಸಿದ್ಧರಿರಬೇಕು. ನೀತಿಯುತ ಸಮಾಜ ನಿರ್ಮಾಣಕ್ಕೆ ವಕೀಲ ವೃತ್ತಿಯನ್ನು ಆರಿಸುವುದು ಅಗತ್ಯ. ಡಾಕ್ಟರ್, ಇಂಜಿನಿಯರ್ ಜೊತೆಗೆ ಇತರ ವೃತ್ತಿಗಳತ್ತವೂ ಗಮನ ಕೊಡಬೇಕು ಎಂದರು.
ಲೆಕ್ಕ ಪರಿಶೋಧನಾ ತಜ್ಞೆ ಕು. ರೇಶ್ಮಾ ರೊಡ್ರಿಗಸ್ ಮಾತನಾಡಿ, ಮಕ್ಕಳಿಗೆ ವೃತ್ತಿಯ ಸೂಕ್ತ ಮಾರ್ಗದರ್ಶನ ನೀಡಬೇಕು, ಮಕ್ಕಳು ತಮಗೆ ಆಸಕ್ತಿ ಇರುವ ಕ್ಷೇತ್ರದ ಬಗ್ಗೆ ತಿಳಿದು ಮುಂದುವರಿಯಬೇಕು ಎಂದರು.
ಗುರುಪುರ ಪಂಚಾಯತ್ ಸದಸ್ಯೆ ಗ್ಲಾಡಿಸ್ ಕ್ವಾಡ್ರಸ್ ಮಾತನಾಡಿ ಎಲ್ಲಾ ವೃತ್ತಿಗಿಂತಲೂ ಶಿಕ್ಷಕ ವೃತ್ತಿಯೇ ಮೇಲು, ಅವರು ತಮ್ಮ ವೃತ್ತಿಯನ್ನು ಸೇವೆ ಎಂದು ಪರಿಗಣಿಸಬೇಕು ಎಂದರು.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದೇವಾಲಯದ ವ್ಯಾಪ್ತಿಯಲ್ಲಿರುವ ಶಿಕ್ಷಕರನ್ನು ಗೌರವಿಸಲಾಯಿತು.
ವಿದ್ಯಾರ್ಥಿ ನೀಲ್ ತಾವ್ರೊ ಅಭಿನಂದನೆ ಸ್ವೀಕರಿಸಿ ಕಲಿಕಾ ಅನುಭವಗಳನ್ನು ಹಾಗೂ ಶಿಕ್ಷಕಿ ಜೆಸಿಂತಾ ಪೆರಿಸ್ ವೃತ್ತಿಯ ಅನುಭವವನ್ನು ಹಂಚಿಕೊಂಡರು.ವೇದಿಕೆಯಲ್ಲಿ ಪೊಂಪೈ ಮಾತೆ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷರಾದ ರಿಚ್ಛಾರ್ಡ್ ಫೆರ್ನಾಂಡಿಸ್, ಕಾರ್ಯದರ್ಶಿ ಜೆರಾಲ್ಡ್ ಲೊಬೋ, ಕಥೊಲಿಕ್ ಸಭಾ ಪೇಜಾವರ ವಾರಾಡೊ ಅಧ್ಯಕ್ಷರಾದ ಹೆನ್ರಿ ವಾಲ್ಡರ್ ಉಪಸ್ಥಿತರಿದ್ದರು.ಕಥೊಲಿಕ್ ಸಭಾ ಗುರುಪುರ ಘಟಕ ಅಧ್ಯಕ್ಷರಾದ ಸಿಲ್ವಿಯಾ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಕು. ರೆನಿಟಾ ಸಿಕ್ವೆರಾ ವಂದಿಸಿದರು. ರೋಮನ್ಸ್ ಲೋಬೋ ನಿರೂಪಿಸಿದರು. ಕಲಾಕುಲ್ ಪಂಗಡದಿಂದ `ಬದ್ಲಾವಣ್’ ಬೀದಿ ನಾಟಕ ಪ್ರದರ್ಶಿಸಲಾಯಿತು.

 

By Suddi9

Leave a Reply

Your email address will not be published. Required fields are marked *