ಬಂಟ್ವಾಳ:ಇಲ್ಲಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುರತ್ಕಲ್ನ ವಿದ್ಯಾದಾಯಿನಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಇಲ್ಲಿನ 7ನೇ ತರಗತಿ ವಿದ್ಯಾರ್ಥಿನಿ ಹೇಮಶ್ರೀ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ , 5ನೇ ತರಗತಿ ವಿದ್ಯಾರ್ಥಿನಿವಾಸ ವಿ ಕನ್ನಡ ಕಂಠಪಾಠದಲ್ಲಿ ತೃತೀಯ, 4ನೇ ತರಗತಿ ವಿದ್ಯಾರ್ಥಿನಿ ಗೌತಮಿ ಮರಾಠಿ ಕಂಠಪಾಠದಲ್ಲಿ ತೃತೀಯ ಸ್ಥಾನ ದೊರೆತಿದೆ. ರಸಪ್ರಶ್ನೆ ಸ್ಪರ್ಧೆ ಯಲ್ಲಿ ವಿದ್ಯಾರ್ಥಿ ಗಳಾದ ಆದಿತ್ಯಕೃಷ್ಣ, ಚರಿತ್ ಪೂಜಾರಿ, ಹರ್ಷಿ ತಾ, ಶ್ರೀನಿವಾಸ, ಗಗನ್, ಭೂಷಣ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
