ಬಂಟ್ವಾಳ: ಜಿಲ್ಲೆಯ ಒಟ್ಟು ಅಭಿವೃದ್ಧಿಯಲ್ಲಿ ಸಹಕಾರಿ ಸಂಘ ಮತ್ತಿತರ ಬ್ಯಾಂಕುಗಳ ಪಾತ್ರ ಮುಖ್ಯವಾಗಿದ್ದು, ಇದರಿಂದಾಗಿ ಪ್ರತೀ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಈ ಕ್ಷೇತ್ರದಲ್ಲಿ ಮತದಾರರಿಗೆ ನಿರಾಶೆ ಆಗದಂತೆ ರಾಜಧರ್ಮವನ್ನು ಪಾಲಿಸಿ ಜನಪರ ಕೆಲಸ ಮಾಡುತ್ತೇನೆ ಎಂದು ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದ್ದಾರೆ.
ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ಕಚೇರಿ ಬಳಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸ್ವಂತ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡ 4ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

bantwal
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಶೇ.100ರಷ್ಟು ಸಾಲವಸೂಲಾತಿ ಸಾಧನೆಗೆ ಈ ಜಿಲ್ಲೆ ಪಾತ್ರವಾಗಿದ್ದು, ಇದಕ್ಕೆ ಇಲ್ಲಿನ ಪ್ರಾಮಾಣಿಕ ರೈತರು ಮತ್ತು ಮಹಿಳೆಯರು ಪ್ರಮುಖ ಕಾರಣ. ಬ್ಯಾಂಕಿನ ಲಾಭಾಂಶದಲ್ಲಿ ದೇಣಿಗೆ ಸಂಗ್ರಹಿಸಿ ಕೊಡಗು ನೆರೆ ಸಂತ್ರಸ್ತರಿಗೆ ಸಮರ್ಪಿಸುವ ಮೂಲಕ ಇಲ್ಲಿನ ಸಹಕಾರಿ ಸಂಘವು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಸಹಕಾರ ಸಂಘಗಳ ಉಪನಿಬಂಧಕ ಬಿ. ಕೆ.ಸಲೀಂ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಭಾರತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಶುಭ ಹಾರೈಸಿದರು.
ಇದೇ ವೇಳೆ ಸಹಕಾರ ಭಾರತಿ ಮತ್ತು ಡಿಸಿಸಿ ಬ್ಯಾಂಕಿನ ಮೂಲಕ ಸಂಘದ ಲಾಭಾಂಶದಿಂದ ತಲಾ ರೂ 2.25 ಲಕ್ಷದಂತೆ ಒಟ್ಟು ರೂ 4.5ಲಕ್ಷ ಮೊತ್ತದ ಚೆಕ್ಕನ್ನು ಕೊಡಗು ನೆರೆ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,
ಸಂಘದ ಉಪಾಧ್ಯಕ್ಷ ಕೇಶವ ಪಿ., ನಿರ್ದೇಶಕರಾದ ಶ್ರೀನಿವಾಸ ಭಟ್, ನಾಗಪ್ಪ ನಾಯ್ಕ, ಮೋಹಿನಿ ಜೆ. ಶೆಟ್ಟಿ, ಮಮತ, ಜ್ಞಾನೇಶ್ವರ ಪ್ರಭು, ನಾಗೇಶ, ಸಂಜಿವ ಬಂಗೇರ, ಪ್ರದೀಪ್ ಶೆಟ್ಟಿ, ಮೇಲ್ವಿಚಾರಕ ಕೇಶವ ಕಿಣಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಿ.ಆನಂದ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಮೋಹನ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಪ್ರೇಮನಾಥ ಶೆಟ್ಟಿ ನರಿಕೊಂಬು ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *