ಗುರುಪುರ : ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಕೋಟ ಬ್ರಾಹ್ಮಣ ಸಂಘದ ಕೂಟ ಮಹಾ ಜಗತ್ತಿನ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಪೊಳಲಿ ಕೂಟ ಮಹಾ ಜಗತ್ತು ವ್ಯಾಪ್ತಿಯ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಜಿ ಕೆ ಕೃಷ್ಣ ಭಟ್, ಕೋಟ ಬ್ರಾಹ್ಮಣ ಜಗತ್ತು ಪೊಳಲಿ ಘಟಕದ ಅಧ್ಯಕ್ಷ ಕಮಲಾಕ್ಷ ಭಟ್, ಸುಬ್ರಾಯ ಕಾರಂತ, ರಮೇಶ್ ಭಟ್ ಕಲ್ಕುಟ ಪೊಳಲಿ, ಚಂದ್ರಶೇಖರ್ ಭಟ್(ಅರ್ಚಕ, ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು) ಹಾಗೂ ಪೊಳಲಿ ಮಹಿಳಾ ವೇದಿಕೆ ಅಧ್ಯಕ್ಷೆ ಪದ್ಮನಿ ಭಟ್ ಮೊದಲಾದವರಿದ್ದರು. ವಿದ್ಯಾರ್ಥಿ ವೇತನ ವಿರಣೆಗೆ ಮುಂಚೆ ಪೊಳಲಿ ಮಹಿಳಾ ಘಟಕದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ಜರುಗಿತು.
