ಕೈಕಂಬ: ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಮಾಸ್ತಿ ಮನೆ ದಿ.ಗಂಗಯ್ಯ ಮೇಸ್ತ್ರೀಯವರ ಧರ್ಮಪತ್ನಿ ರುಕ್ಮಿಣಿ ಕೆ. (77) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನಹೊಂದಿದರು. ಮೃತರು ಪುತ್ರಿ ಮತ್ತು ಇಬ್ಬರು ಪುತ್ರರನ್ನು ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
