ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಪಿಲಿಮೊಗರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶಾರದಾದೇವಿಯವರು ಆಯ್ಕೆಯಾಗಿದ್ದಾರೆ.
ಇಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಪ್ರಶಸ್ತಿ ಸ್ವೀಕರಿಸಲಿರುವರು.

0409pkt1(sharada devi)
ಮೂಲತಃ ರಾಮಕುಂಜದವರಾದ ಅವರು ಪ್ರಸ್ತುತ ಬಿ.ಸಿ.ರೋಡ್ನಲ್ಲಿ ವಾಸವಾಗಿದ್ದಾರೆ. ಕಳೆದ 36 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಅವರು 1978ರಲ್ಲಿ ಕಡಬದ ಕುಟ್ರುಪಾಡಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಆರಂಭಿಸಿ 3 ವರ್ಷ ಸೇವೆ ಸಲ್ಲಿಸಿದ್ದರು.ಬಳಿಕ 1981ರಿಂದ 9 ವರ್ಷ ಪುತ್ತೂರಿನ ಅಲಂಕಾರಿನಲ್ಲಿ , 1990ರಿಂದ ಬ್ರಹ್ಮರಕೂಟ್ಲು ಶಾಲೆಯಲ್ಲಿ 14 ವರ್ಷ, 2004ರಿಂದ ಪಿಲಿಮೊಗರು ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದ 10 ವರ್ಷಗಳಲ್ಲಿ ಪಿಲಿಮೊಗರು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಅವರು ಸರಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು , ಶಾಲಾ ವಠಾರದಲ್ಲಿ 650 ಗೇರು ಸಸಿ,ತೆಂಗಿನ ಗಿಡಗಳು, ವಿವಿಧ ಫಲವಸ್ತುಗಳ 250ಕ್ಕೂ ಮಿಕ್ಕಿ ಸಸಿಗಳನ್ನು ನೆಡಿಸಿದ್ದಾರೆ. ಶಾಲೆಯಲ್ಲಿ ಕೈತೋಟ ರಚನೆ, ವಿವಿಧ ಸಂಪನ್ಮೂಲಗಳಿಂದ ಕುಡಿಯುವ ನೀರಿನ ಯೋಜನೆ, ಕೊಳವೆ ಬಾವಿ ನಿಮರ್ಾಣ, ಆವರಣ ಗೋಡೆ, ಇಂಗ್ಲೀಷ್ ಬೋಧನೆ, ವಿದ್ಯಾಥರ್ಿ ದತ್ತು ಯೋಜನೆ, ಉಚಿತ ಲೇಖನ ಪುಸ್ತಕ ಕೊಡುಗೆ,ಬ್ಯಾಂಡ್ ಸೆಟ್ ಕೊಡುಗೆಗಳುಅವರ ಸೇವಾ ಅವಯ ಸಾ`ಧನೆಗಳು. ವಿದ್ಯಾಥರ್ಿಗಳಿಗೆ ಯಕ್ಷಗಾನ, `ಭರತನಾಟ್ಯ ಸಹಿತ ವಿವಿಧ ಸಾಂಸ್ಕೃತಿಕ ಮೌಲ್ಯಯುತ ತರಬೇತಿಗಳನ್ನು ಕೊಡಿಸುವ ಮೂಲಕ ವಿದ್ಯಾಥರ್ಿಗಳ ಸಮಗ್ರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಪ್ರತಿಭಾಕಾರಂಜಿಯ ವಿವಿ`ಧ ವಿಭಾಗಗಳಸ್ಪಧರ್ೆಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ, ಮೌಲ್ಯಾಂಕನದಲ್ಲಿ ಉತ್ತಮ ಸಾಧನೆ, ಕಲಿಕೋತ್ಸವದಲ್ಲಿ ಸಾಧನೆ ಅವರ ಶಾಲೆಯ ಹೆಗ್ಗಳಿಕೆ.
2007ರಲ್ಲಿ ಪ್ರತಿ`ಾನ್ವಿತ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಅವರು 2000ದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿಯನ್ನು ಪುಟಾಣಿ ವಿಜ್ಞಾನ ಪತ್ರಿಕಾ ಸಂಸ್ಥೆಯಿಂದ ಪಡೆದಿದ್ದಾರೆ. 1997ರಲ್ಲಿ ರಾಜ್ಯಮಟ್ಟದ ವಿಜ್ಞಾನ ಪ್ರತಿ`ಾ ಪರೀಕ್ಷೆಯಲ್ಲಿ ಪ್ರಶಸ್ತಿ ಹಾಗೂ ಉತ್ತಮ ಕ್ರೀಡಾಪಟು ಆಗಿರುವ ಅವರು ಶಿಕ್ಷಕರ ಸ್ಪ`ರ್ೆಗಳ ವಿವಿ` ವಿ`ಾಗಗಳಲ್ಲಿ ಬಹುಮಾನ ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *