ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮತ್ತು ಮೇಲ್ಸೇತುವೆ ಬದಿ ನಿಮರ್ಿಸಲಾಗಿರುವ ಸವರ್ಿಸ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಬೃಹತ್ ಗಾತ್ರದ ಹೊಂಡವೊಂದು ಕಾಣಿಸಿಕೊಂಡಿದ್ದರೂ ಹೆದ್ದಾರಿ ಪ್ರಾಧಿಕಾರ ಅಥವಾ ಬಂಟ್ವಾಳ ಪುರಸಭೆ ಮಾತ್ರ ಈ ಬಗ್ಗೆ ಮೌನವಹಿಸಿರುವುದು ಇಲ್ಲಿನ ವಾಹನ ಸವಾರರು ಮತ್ತು ನಾಗರಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

