ಬಂಟ್ವಾಳ: ಮಗು ಆರೋಗ್ಯವಂತಾಗಬೇಕಾದರೆ ತಾಯಂದಿರು ಪೌಷ್ಟಿಕ ಆಹಾರದ ಜೊತೆಗೆ ಮಾನಸಿಕವಾಗಿ ಮಗುವನ್ನು ಪೋಷಣೆ ಮಾಡುವುದು ಅತೀ ಅಗತ್ಯ ಎಂದು ಪುರಸಭಾ ಸದಸ್ಯ ವಾಸು ಪೂಜಾರಿ ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಬಿ.ಕಸ್ಬಾ ವಲಯದ ಅಂಗನವಾಡಿ ಕೇಂದ್ರಗಳು , ನಗರ ಸ್ತ್ರೀಶಕ್ತಿ ಗುಂಪುಗಳು ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಸಮಾಜಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು. ಇಂತಹ ಸರಕಾರದ ಕಾರ್ಯಕ್ರಮಗಳಲ್ಲಿ ಪೋಷಕರು ಭಾಗವಹಿಸಿದಾಗ ಮಾತ್ರ ಯೋಜನೆಗಳು ಸದ್ವಿನಿಯೋಗವಾದಿತು ಎಂದರು.

DSC_3973
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತಿ ಚಂದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾವೂರು ವೈದ್ಯಾಧಿಕಾರಿ ಜೀವನ್ ಶೆಟ್ಟಿ, ಮಂಗಳೂರು ಮಕ್ಕಳ ರಕ್ಷಣಾ ಘಟಕದ ಶಿವರಾಜ್, ಸ.ಸೇ.ಸ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಉಮೇಶ್, ಹಿರಿಯ ಆರೋಗ್ಯ ಸಹಾಯಕಿ ಮಾಲತಿ, ಗೀತಾ ಜಯತೀರ್ಥ, ಸುನೀತಾ ಪದ್ಮನಾಭ, ಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪುಷ್ಪಲತಾ, ಅಂ.ಕಾರ್ಯಕತರ್ೆಯರಾದ ಪುಷ್ಪಾವತಿ, ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು. ಬಿ.ಕಸ್ಬಾ ವಲಯದ ಎಲ್ಲಾ ಅಂಗನವಾಡಿ ಕಾರ್ಯಕತರ್ೆಯರು ಪೌಷ್ಠಿಕ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು

By suddi9

Leave a Reply

Your email address will not be published. Required fields are marked *