ಸುದ್ದಿ9 ಬಜ್ಪೆ: ಇಲ್ಲಿನ ಹ್ರದಯ ಭಾಗದಲ್ಲಿ ನೂತನ ಬಸ್ ನಿಲ್ದಾಣ ನಿಮರ್ಾಣ ಮಾಡುವ ಹಿನ್ನೆಲೆಯಲ್ಲಿ ಹಳೆಯ ಬಸ್ ತಂಗುದಾಣವನ್ನು ಬುಧವಾರ ಸಂಜೆ ಒಡೆದು ತೆಗೆಯಲಾಯಿತು. ಈ ಸಂದರ್ಭ ಮಂತ್ರದೇವತೆಯ ಪಂಚಲೋಹದ ವಿಗ್ರಹ ಪತ್ತೆಯಾಗಿದ್ದು ಸ್ಥಳೀಯವಾಗಿ ನಾನಾ ವದಂತಿಗೆ ಕಾರಣವಾಯಿತು.

3 bajpe 3

3 bajpe 1

3 bajpe 2
ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಸುವರ್ಣ ನೇತೃತ್ವದಲ್ಲಿ ಹಳೆಯ ಬಸ್ ನಿಲ್ದಾಣವನ್ನು ಒಡೆದು ತೆಗೆಯಲಾಗಿದೆ. ಗುರುವಾರ ಬೆಳಗ್ಗೆ ಇಲ್ಲಿ ಹೊಸ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಹೀಗೆ ಬಸ್ ನಿಲ್ದಾಣ ಹಾಗೂ ಸುತ್ತಲಿನ ಅಂಗಡಿ-ಮುಂಗಟ್ಟುಗಳನ್ನು ಒಡೆಯುವ ಸಂದರ್ಭ ಪಂಚಲೋಹದ ದೈವದ ವಿಗ್ರಹ ಪತ್ತೆಯಾಗಿದೆ. ಈ ವೇಳೆ ಸ್ಥಳದಲ್ಲಿ ನೂರಾರು ಕುತೂಹಲಿಗರು ನೆರೆದಿದ್ದರು.
ಪಂಚಲೋಹದ ವಿಗ್ರಹ ಪುರಾತನ ಕಾಲದ್ದಾಗಿದ್ದು ಯಾರೋ ತಂದು ಬಸ್ ನಿಲ್ದಾಣದಲ್ಲಿ ತ್ಯಜಿಸಿ ಹೋಗಿದ್ದಿರಬೇಕೆಂದು ಶಂಕಿಸಲಾಗಿದೆ. ವಿಗ್ರಹವನ್ನು ಸ್ಥಳೀಯ ಭಟ್ಟರಿಗೆ ಕೊಟ್ಟು ನೀರಿನಲ್ಲಿ ವಿಸಜರ್ಿಸಲಾಯಿತು ಎಂದು ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ಸುವರ್ಣ ಮಾಹಿತಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *