ಸುದ್ದಿ9ಮೂಡುಬಿದರೆ: ಶ್ರೀ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಆಶ್ರಯದಲ್ಲಿ ಮನಸ್ಸು ಮತ್ತು ಅರ್ಥಶಾಸ್ತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು
ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ರಮೇಶ್ ಕೆದ್ಲಾಯ ಉಪನ್ಯಾಸ ನೀಡುತ್ತಾ, ಕಲ್ಪನೆಯ ಲೋಕದಲ್ಲಿರುವ ಮನಸ್ಸು ಹಾಗೂ ಅರ್ಥಶಾಸ್ತ್ರದ ಮೇಲೆ ನಿಂತಿರುವ ಸಾಮಾಜಿಕ ಸಂಬಂಧಗಳು ಹೃದಯದ ಭಾಷೆಯನ್ನು ಮರೆಮಾಚುವ ಕೆಲಸವನ್ನು ಮಾಡುತ್ತದೆ. ಕಿಸೆಯನ್ನು ತುಂಬುವಲ್ಲಿ , ಕಿಸೆಯ ಹಿಂದಿರುವ ಹೃದಯವನ್ನು ಮರೆತುಬಿಡುತ್ತೇವೆ. ಪ್ರತಿಯೊಬ್ಬರೂ ಹೃದಯದ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು ಹಾಗೆ ಆದಾಗ ಧನಾತ್ಮಕ ಭಾವನೆಗಳು ಹುಟ್ಟಿಕೊಳ್ಳುತ್ತದೆ ಎಂದು ಅವರು ಹೇಳಿದರು.
ಪ್ರಾಂಶುಪಾಲ ಪ್ರೊ. ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಾಸುದೇವ್ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ರೇವತಿ ಸ್ವಾಗತಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಲತಾ ವಂದಿಸಿದರು.

