ಕೈಕಂಬ: ಸೆ.4 ಗುರುವಾರ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.25ಕ್ಕೆ ತೆನೆಹಬ್ಬ(ಪುದ್ದರ್) ನಡೆಯಲಿದೆ. ಈ ವೇಳೆ ಪೊಳಲಿಯಲ್ಲಿ ವಿಶೇಷ ಪೂಜೆ-ಹವಣಾದಿಗಳು ನಡೆಯಲಿದ್ದು , ದೇವಸ್ಥಾನದ ಅಲ್ಲಲ್ಲಿ ತೆನೆಕಟ್ಟಲಿದೆ. ಪೊಳಲಿಯಲ್ಲಿ ತೆನೆಹಬ್ಬ ಆಚರಿಸಿದ ನಂತರ ಪೊಳಲಿ ಸುತ್ತಮುತ್ತಲಿನ ಊರಾದ ಮಳಲಿ, ಪೊಳಲಿ ಕಾಜಿಲದಲ್ಲಿ ತೆನೆಹಬ್ಬ ಆಚರಿಸಲಾಗುತ್ತದೆ. ಇದಕ್ಕೆ ತುಳುವಲ್ಲಿ `ಇಲ್ಲ್ ದಿಂಜಾವುನಿ’ ಎಂದು ಹೇಳಲಾಗುತ್ತಿದ್ದು, ಭಾರೀ ವಿಜೃಂಭಣೆಯಿಂದ ನಡೆಯುತ್ತದೆ.

