ಸುದ್ದಿ9 ಕೈಕಂಬ: ನಿರ್ಜೀವ ಕಲ್ಲಿಗೆ ಜೀವ ನೀಡುತ್ತಾ ಸಾಧನೆ ಮಾಡುತ್ತಿರುವ ಜೀವಂತ ಪ್ರತಿಭೆಯ ಕಥೆ ಇದು. ಗರ್ಭಗುಡಿಗಳಲ್ಲಿ ಭಕ್ತರ ಸಾಕಾರ ಮೂರ್ತಿಯಾದ ಪರಮಾತ್ಮನ ಮೂರ್ತಿಯನ್ನು ರಚಿಸುವ ಸಾತ್ವಿಕ ಕೆಲಸವನ್ನು ಮಾಡುತ್ತಾ ತನ್ನ ಕರ್ತವ್ಯದಲ್ಲಿಯೇ ತೃಪ್ತಿ ಕಾಣುವ ಸಾತ್ವಿಕ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇವೆ. ಈತನ ಹೆಸರು ಲಕ್ಷಣ ಶರ್ಮಾ.
ಬಿಹಾರದ ಶೇಕ್ ಪುರ ಜಿಲ್ಲೆಯ ಬಾರ್ಬಿಗಾ ತಾಲೂಕಿನ ಸರ್ಬ್ ಗ್ರಾಮದ ಕೃಷ್ಣ ಮುರಾರಿ ಪ್ರಸಾದ್ ನಿರ್ಮಲಾ ದೇವಿಯವರ ಮೂರನೆಯ ಪುತ್ರನಾಗಿರುವ ಲಕ್ಷ್ಮಣ ಶರ್ಮಾ ಮರದ ಹಾಗೂ ಕಲ್ಲಿನ ಶಿಲ್ಪಗಳನ್ನು ಕೆತ್ತುವ ಅದ್ಭುತ ಕಲಾಕಾರ.
ಬಿಹಾರದಲ್ಲಿದ್ದ ಲಕ್ಷ್ಮಣ ಶರ್ಮಾ ಪಿಯುಸಿ ಮುಗಿಸಿ ಮಂಗಳೂರಿನ ಬಿಜೈ ಎಂಬಲ್ಲಿಗೆ ಬಂದಿದ್ದು ಅಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಸ್ವಲ್ಪ ವರ್ಷ ದುಡಿದಿದ್ದರು. ಸ್ವಲ್ಪ ಸಮಯ ಕಂಪ್ಯೂಟರ್ ಕಲಿಯಲಾರಂಭಿಸಿದ್ದಾರೆ. ಇವರಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದು ಇವರ ಚಿಕ್ಕಪ್ಪ ಬಿ.ಕೆ.ಶರ್ಮಾ ಅವರ ಗೆಳೆಯ ಎಂ.ಕೆ.ಎಸ್ ಪ್ರಭು ಅವರು. ನಂತರ ಇವರಿಗೆ ಶಿಲ್ಪಕಲೆಯಲ್ಲಿ ವಿಶೇಷ ಆಸಕ್ತಿ ಮೂಡಲಾರಂಭಿಸಿತು.
ನಂತರ ಇವರು ತೆರಳಿದ್ದು ಸೀದಾ ಕಾರ್ಕಳದ ಸಿಇ ಕಾಮತ್ ಅವರ ಇನ್ಸ್ಟಿಟ್ಯೂಟ್ ಆರ್ಟ್ಶಶನ್ ಕಲಾಕೇಂದ್ರಕ್ಕೆ. ಈ ಕಲಾಕೇಂದ್ರದ ಗುಣಂತೇಶ್ವರ ಭಟ್ ಅವರನ್ನು ಗುರುಗಳನ್ನಾಗಿ ಸ್ವೀಕರಿಸಿ ಅವರಲ್ಲಿ ಒಂದೂವರೆ ವರ್ಷ ಶಿಲ್ಪಕಲೆಯನ್ನು ಕಲಿತರು. ಕೇವಲ ಒಂದೂವರೆ ವರ್ಷದಲ್ಲೇ ಶಿಲ್ಪ ಕೆತ್ತನೆಯನ್ನು ಕಲಿತ ಶರ್ಮಾ ಅವರ ಅಗಾಧ ಪ್ರತಿಭೆಯನ್ನು ಕಂಡು ಗುಣಂತೇಶ್ವರ್ ಭಟ್ ಅವರು ಶಮರ್ಾ ಅವರನ್ನು ತನ್ನಲ್ಲೇ ಕೆಲಸಕ್ಕೆ ಇಟ್ಟುಕೊಂಡರು. ಇದರಿಂದ ಅವರು ಮೂರ್ತಿ ಕೆತ್ತನೆಯಲ್ಲಿ ಇನ್ನಷ್ಟು ಪಕ್ವರಾದರು.
ಅಲ್ಲಿಂದ ನಾಗೇಶ್ ಆಚಾರ್ಯ ಅವರ ಬಳಿ ಮರದ ಕೆತ್ತನೆಯನ್ನು ಕಲಿತು ಅದನ್ನೂ ಸಿದ್ದಿಸಿಕೊಂಡರು. ಬಳಿಕ ಗುರುಪುರ ಕೈಕಂಬದ ವಿಕಾಶನಗರದಲ್ಲಿ `ಶರ್ಮಾ ಶಿಲ್ಪ ಕೇಂದ್ರ’ವನ್ನು ಸ್ಥಾಪಿಸಿ ಮರದ ಹಾಗೂ ಕಲ್ಲಿನ ಮೂರ್ತಿ ಕೆತ್ತನೆಯ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ಕೇಂದ್ರದಲ್ಲಿ ಈಗ ಏಳು ಜನರು ಶಿಲ್ಪಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ತಯಾರಿಸುವ ಮೂರ್ತಿ ಗೆ ಬಲು ಬೇಡಿಕೆ ಇದೆ. ಮಹಾರಾಷ್ಟ್ರ, ಕಾರ್ನಟಕ, ಗೋವಾದಿಂದ ಇವರನ್ನು ಹುಡುಕಿಬರುವ ಭಕ್ತರು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ಬೇಡಿಕೆ ಇಡುತ್ತಾರೆ.
ಇವರು ತಯಾರಿಸಿದ ಅನೇಕ ಮೂರ್ತಿಗಳು ಹಲವಾರು ದೇವಸ್ಥಾನಗಳ ಗರ್ಭಗುಡಿಯಲ್ಲಿ ರಾರಾಜಿಸಿ ಪ್ರಾಣಪ್ರತಿಷ್ಠೆ ಪಡೆದಿವೆ. ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಇವರ ಹಲವಾರು ಕೆತ್ತನೆಗಳು ಕಂಡುಬರುತ್ತಿವೆ. ಮೂಡಬಿದ್ರೆಯ ವೆಂಕಟರಮಣ ದೇವಸ್ಥಾನದ ಗರ್ಭಗುಡಿಯಲ್ಲಿ ಇವರ ಮೂರ್ತಿಗಳು ಕಂಡುಬರುತ್ತಿವೆ.
ಅದರ ಜೊತೆಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯ ಮುಂಭಾಗದಲ್ಲಿರುವ ಗಣಪನ ವಿಗ್ರಹ ಇವರ ಕೆತ್ತನೆಯಗಾಗಿದೆ. ಮಹಾರಾಷ್ಟ್ರದಲ್ಲಿ ಕಾಲಭೈರವೇಶ್ವರನ ಮೂರ್ತಿ, ಮಂಡ್ಯದಲ್ಲಿ ಮರದ ಕೆತ್ತನೆಗಳು ಕೂಡಾ ಇವರದ್ದೇ ಕೈಯ್ಯಲ್ಲಿ ರೂಪುಗೊಂಡಂತವುಗಳು.
ಅದರ ಜೊತೆಗೆ ಪಾಶ್ರ್ವನಾಥ, ಬಾಲಾಜಿ, ಶಿವ, ವಿಶ್ವಕರ್ಮ, ದರ್ಪಣ ಸುಂದರಿ ಇವರು ಕೆತ್ತಿದ್ದಾರೆ. ಯಾವುದೇ ವಂಶಪಾರಂಪರ್ಯದ ಹಿನ್ನೆಲೆ ಇರದ ಲಕ್ಷ್ಮಣ ಶರ್ಮಾ ಅವರು ತ್ನ ಸ್ವಂತ ಪರಿಶ್ರಮ ಹಾಗೂ ಅಗಾಧ ಪ್ರತಿಭೆಯಿಂದ ಶಿಲ್ಪಕೆತ್ತನೆಯ ಕಲೆಯನ್ನು ಬೆಳೆಸಿದ್ದಾರೆ. ಕರ್ಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ ಎಂಬುವುದಕ್ಕೆ ಲಕ್ಷ್ಮಣ ಶರ್ಮಾ ಅವರು ಜೀವಂತ ನಿದರ್ಶನ.
ಲಕ್ಷ್ಮಣ ಶರ್ಮಾ ಅವರ ಸಾಧನೆಯನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿಗಳೂ ಬಂದಿವೆ. ಇತ್ತೀಚೆಗೆ ಬೆಂಗಳೂರು ಕೆನರಾ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ `ಕಲಾಕುಸುರಿಯಲ್ಲಿ ಗ್ರಾಮೀಣ ಪ್ರತಿಭೆ’ ಎಂದು ಬ್ಯಾಂಕ್ ಅಧ್ಯಕ್ಷರಾದ ಆರ್ ಕೆ. ದುಬೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಬೆಂಗಳೂರು ಕೆನರಾ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ `ಕಲಾಕುಸುರಿಯಲ್ಲಿ ಗ್ರಾಮೀಣ ಪ್ರತಿಭೆ’ ಎಂದು ಬ್ಯಾಂಕ್ ಅಧ್ಯಕ್ಷರಾದ ಆರ್ ಕೆ. ದುಬೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸದ್ಯ ಗುರುಪುರ ಕೈಕಂಬದಲ್ಲಿ ಮನೆಮಾಡಿಕೊಂಡಿರುವ ಇನ್ನೂ 30 ವರ್ಷದ ಲಕ್ಷ್ಮಣ್ ಶರ್ಮಾ ಅವರಿಗೆ ಮದುವೆಯಾಗಿದ್ದು ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಜೊತೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಇವರ ಅದ್ಭುತ ಪ್ರತಿಭೆಯನ್ನು ಕಂಡು ಕೈಕಂಬದ ಉದ್ಯಮಿ ಕೊಡುಗೈ ದಾನಿ ಎಂದೇ ಪರಿಚಿತರಾದ ರಾಜೇಶ್ ಪೈ ಇವರು ಮನೆಯ ವ್ಯವಸ್ಥೆ ಮತ್ತು ಕೈಕಂಬದ ವಿಕಾಸನಗರದಲ್ಲಿ ವರ್ಕ್ ಶಾಪ್ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಷ್ಟೆಲ್ಲಾ ಅದ್ಭುತ ಪ್ರತಿಭೆ ಇರುವ ಲಕ್ಷ್ಮಣ್ ಶರ್ಮಾ ಅವರನ್ನು ಇದುವರೆಗೂ ಯಾರೂ ಗುರುತಿಸಿಲ್ಲ. ಶರ್ಮಾ ಅವರನ್ನು ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯಾದ 9663264184 ಅನ್ನು ಸಂಪರ್ಕಿಸಬಹುದು.



