ಎಡಪದವು: ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಕುಪ್ಪೆಪದವು ಸಮೀಪದ ಕಿಲೆಂಜಾರು ಕಂಬಳಕೋಡಿ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇಲ್ಲಿನ ನಿವಾಸಿ ಮೋಂಟ ನಾಯ್ಕ(75) ಎಂಬವರು ಆತ್ಮಹತ್ಯೆಗೈದಿರುವ ವ್ಯಕ್ತಿಯಾಗಿದ್ದಾರೆ.
ಮೋಂಟ ಅವರು ತಮ್ಮ ಮನೆಯ ಪಕ್ಕದ ತೋಟದಲ್ಲಿ ವಿಷ ಸೇವಿಸಿದ್ದರು. ಪಕ್ಕದ ಮನೆಯ ನಿವಾಸಿಯೊಬ್ಬರು ಈ ಸ್ಥಳದಲ್ಲಿ ಬರುತ್ತಿದ್ದಾಗ ಮೋಂಟ ಅವರು ಒದ್ದಾಟ  ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಇತರರಿಗೆ ಸುದ್ದಿ ಮುಟ್ಟಿಸಿ ಪರಿಶೀಲನೆ ನಡೆಸಿದಾಗ ವಿಷ ಸೇವಿಸಿರುವುದು ಅರಿವಿಗೆ ಬಂದಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲೆತ್ನಿಸಿದರೂ ಆ ವೇಳೆಗೆ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
0908malaliM7
ಮೋಂಟ ಅವರು ಹಿರಿಯ ಕಾಂಗ್ರೆಸಿಗರಾಗಿದ್ದು, ಎಡಪದವು ವ್ಯವಸಾಯ ಸೇವಾ ಸಹಕಾರಿಯ ನಿರ್ದೇಶಕರಾಗಿದ್ದರು. ಒಬ್ಬರು ಗಂಡು ಹಾಗೂ ನಾಲ್ವರು ಹೆಣ್ಮಕ್ಕಳನ್ನು ಅಗಲಿದ್ದಾರೆ. ಬಜಪೆ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *