ಇಸ್ಲಾಮಾಬಾದ್: ಪಾಕಿಸ್ತಾನದ ಆಂತಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಪ್ರಧಾನಿ ನವಾಜ್ ಶರೀಪ್ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಪಾಕಿಸ್ತಾನದ ಸೇನೆ ಶರೀಪ್ ಅವರಿಗೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದು, ಯಾವಾಗ ಬೇಕಾದರೂ ಶರೀಪ್ ಅವರು ಗಂಟುಮೂಟೆ ಕಟ್ಟುವ ಸಾಧ್ಯತೆ ನಿಚ್ಚಳವಾಗಿದೆ.
ಇಂದು ಬೆಳಗ್ಗೆ ಪೊಲೀಸರ ನಿರ್ದಯ ದಾಳಿಯಿಂದ ಕಂಗೆಟ್ಟ ಪ್ರತಿಭಟನಾಕಾರರು ಸಚಿವಾಲಯದ ಗೇಟ್ ಮುರಿದು ದಾಂಧಲೆ ನಡೆಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದ್ದಾರೆ.

navaz sharief
ಘಟನೆಯಿಂದ ಮನನೊಂದಿರುವ ಪ್ರಧಾನಿ ನವಾಜ್ ಶರೀಫ್ ಅವರು ಪಾಕ್ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಜೊತೆ ಮಾತುಕತೆ ನಡೆಸಿದ್ದಾರೆ.
ರಹೀಲ್ ಅವರು ಶರೀಫ್ ಅವರಿಗೆ ಒಂದು ತಿಂಗಳ ಅವಧಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಸ್ವತಂತ್ರ ತನಿಖೆ ನಡೆಸಲು ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ.
ಈ ನಡುವೆ ಪ್ರತಿಭಟನಾಕಾರರ ಪ್ರತಿಭಟನೆಯೂ ತೀವ್ರಗೊಂಡಿದ್ದು, ಮಾಧ್ಯಮದ ಮೇಲೂ ದಾಳಿ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ಗುಂಡುಗಳನ್ನು ಸಿಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *