ಫರಂಗಿಪೇಟೆ: ಬಂಟರ ಸಂಘ ಫರಂಗಿಪೇಟೆ ವಲಯ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಂಟ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘವು ಹಲವಾರು ವರ್ಷಗಳಿಂದ ವಿದ್ಯಾರ್ಥಿ ವೇತನ, ಸಹಾಯಧನವನ್ನು ಸಮಾಜದ ತೀರಾ ಅವಶ್ಯಕತೆ ಇದ್ದವರಿಗೆ ನೀಡುತ್ತಾ ಬಂದಿದೆ.

ಕಳೆದ ಫೆಬ್ರವರಿಯಂದು ಬಂಟರ ಸಂಗಮ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಶಶಿರಾಜ್ ಶೆಟ್ಟಿ ಕೊಳಂಬೆಯವರು ತಮ್ಮ ಪದಗ್ರಹಣದ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಬಂಟ ಸಮಾಜದ 2 ಬಡ ಕುಟುಂಬಗಳನ್ನು ಗುರುತಿಸಿದ್ದಾರೆ. ಅದರಲ್ಲಿ

1. ಪುದು ಗ್ರಾಮದ ಸುಜೀರು ಎಂಬಲ್ಲಿನ ದಿವಂಗತ ಸೀನ ಆಳ್ವ ಅವರ ಧರ್ಮ ಪತ್ನಿ ವಾರಿಜಾ ಆಳ್ವ (83 ವರ್ಷ) ಅವರ 3 ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.

grahabhagya (2)
2. ಕೊಡ್ಮಾಣ್ ಗ್ರಾಮದ ದಿವಂಗತ ಪೂವಪ್ಪ ರೈ ಇವರ ಧರ್ಮ ಪತ್ನಿ  ಸೀತಾ ರೈ ಇವರು 2 ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.

grahabhagya (1)

ಈ 2 ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುವ ಕೆಲಸಕ್ಕೆ ಕಳೆದ ಮೂರು ತಿಂಗಳ ಹಿಂದೆ ಕಾರ್ಯ ಆರಂಬಿಸಲಾಗಿದೆ. ದಾಖಲೆ ಸಮಯದಲ್ಲಿ ಆ ಎರಡೂ ಮನೆಗಳು ಸಂಪೂರ್ಣವಾಗಿದ್ದು ಅದನ್ನು ಹಸ್ತಾಂತರಿಸಲು ಮುಂದಾಗಿದ್ದಾರೆ.

ವರ್ಷಂಪ್ರತಿ ಆಚರಿಸಿಕೊಂಡು ಬರುವಂತೆ ಈ ವರ್ಷವೂ ಆಟಿ ತಿಂಗಳ ವಿಶೆಷವಾದ ಆಟಿ ಕಲಾ ಕ್ರೀಡೋತ್ಸವ ಎನ್ನುವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಆಚರಿಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಗೃಹಭಾಗ್ಯ ವಿತರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದು ಆ ಎರಡೂ ಕುಟುಂಬಗಳಿಗೂ ಹಸ್ತಾಂತರಿಸಲು ನಿರ್ಧರಿಸಲಾಗಿದೆ.

ಬಂಟ ಸಮಾಜದ ಹಲವು ಮಂದಿ ಈ ಯೋಜನೆಗೆ ಕೈ ಜೋಡಿಸಿದ್ದು ಗೃಹಭಾಗ್ಯ ಯೋಜನೆ ಯಶಸ್ವಿಯಾಗಲು ಸಾಧ್ಯವಾಗಿದೆ. ಈ ಯಶಸ್ವಿನಿಂದಾಗಿ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳವ ಯೋಚನೆಯನ್ನು ಮಾಡಿದ್ದಾರೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *