ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತಿಭಾರದ ಉಪಗ್ರಹ ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ನವೆಂಬರ್ 30ಕ್ಕೆ ಉಡಾವಣೆ ಮಾಡಲಿದ್ದಾರೆ.
5.7 ಟನ್ ಭಾರದ ಈ ಉಪಗ್ರಹವು, ಜಿ ಸ್ಯಾಟ್ 11 ಉಡಾವಣೆಯನ್ನು ಯುರೋಪಿಯನ್ ಬಾಹ್ಯಾಕಾಶ ಉಡಾವಣೆ ಮಾಡಲಿದ್ದಾರೆ. ಜಿ.ಸ್ಯಾಟ್ 11 ಉಡಾವಣೆಯಿಂದ ಇಂಟರ್‍ನೆಟ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಲಿದೆ. ಇದರಿಂದ ದೇಶದ ಅತ್ಯಂತ ವೇಗವಾಗಿ ಡೇಟಾ ವಿನಿಮಯ ಸಾಧ್ಯವಾಗಲಿ ಎಂದು ಹೇಳಲಾಗುತ್ತಿದೆ.

satellite
ಕಳೆದ ಬಾರಿ ಜಿ.ಸ್ಯಾಟ್ 6 ಉಡಾವಣೆ ವಿಫಲವಾದ ಹಿನ್ನೆಲೆಯಲ್ಲಿ ಇಸ್ರೋ ಈ ಬಾರಿ ಉಡಾವಣೆ ಮುನ್ನ ಎಲ್ಲಾ ಆಯಾಮಗಳಿಂದ ಪರೀಕ್ಷೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೇ ಇದು ಅತೀ ಭಾರದ ಸ್ಯಾಟಲೈಟ್ ಆಗಿರುವುದರಿಂದ ಅದರ ಎಲೆಕ್ಟ್ರಿಕಲ್ ಸರ್‍ಕ್ಯೂಟ್ ಸೇರಿದಂತೆ ಎಲ್ಲವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಸಿವನ್ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *