ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘದ ನಿರಂತರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ತಾಲೂಕಿನ ಒಳಗಿನ ನಿವಾಸಿ ಆಗಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಅತ್ಯಂತ ಬಡ ವಿದ್ಯಾರ್ಥಿಗಳು ಆಗಸ್ಟ್ 31 ರ ಒಳಗೆ ದೂರವಾಣಿ ಸಂಖ್ಯೆಯೊಂದಿಗೆ ತಮ್ಮ ಸ್ವ-ವಿವರದ ಅರ್ಜಿಯನ್ನು ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಕಲಿಕಾ ಸರ್ಟಿಫಿಕೇಟ್ ಹಾಗೂ ಅಂಕ ಪಟ್ಟಿಯೊಂದಿಗೆ ಅಧ್ಯಕ್ಷರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ, ಕುಲಾಲ ಸಮುದಾಯ ಭವನ, ಪೊಸಳ್ಳಿ-ಬಿ.ಸಿ ರೋಡು, 574219, ದ.ಕ ಇವರಿಗೆ ಸಲ್ಲಿಸಲು ಕೋರಲಾಗಿದೆ.
