ಮುಂಬಯಿ: ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ರಾಷ್ಟ್ರೀಯ ಮ್ಕಕಳ ಹಬ್ಬ ಶ್ರೀಕೃಷ್ಣ ವೇಷ ಸ್ಪರ್ಧೆಯು ಸೆ. 02 ಭಾನಿವಾರದಂದು ಶ್ರೀಕ್ಷೇತ್ರ ಕದ್ರಿಯಲ್ಲಿ ಜರಗಲಿದೆ.ಈ ಸ್ಪರ್ಧೆಯು ಬೆಳಿಗ್ಗೆ 9ರಿಂದ ಆರಂಭಗೊಂಡು, ರಾತ್ರಿ 9ರವರೆಗೆ ನಡೆಯಲಿದೆ. ಈ ಬೃಹತ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಈ ಬಾರಿ ಒಟ್ಟು 29 ವಿಭಾಗಗಳಿದ್ದು ಎಲ್ಲವೂ ಏಕಕಾಲದಲ್ಲಿ ನಡೆಯಲಿವೆ.

makkala habba

ಸ್ಪರ್ಧೆಯಲ್ಲಿ ಒಂದು ವರ್ಷದೊಳಗಿನ ಕಂದಮ್ಮಗಳಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪಾರಂಪರಿಕ ಹಾಗೂ  ಆಧುನಿಕ ಗೀತೆಗಳ ಪ್ರಸ್ತುತಿ `ಗಾನವೈಭವ’ ಸ್ಪರ್ಧೆಯು ಮಕ್ಕಳಿಗಾಗಿ ಈ ಬಾರಿ 4 ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ರಾಧಾಕೃಷ್ಣ, ದೇವಕಿಕೃಷ್ಣ, ಯಶೋದಕೃಷ್ಣ, ವಸುದೇವಕೃಷ್ಣ, ಯಕ್ಷಕೃಷ್ಣ, ಶಂಖನಾದ, ಶಂಖ ಉದ್ಘೋಷ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ, ಛಾಯಾಕೃಷ್ಣ, ವರ್ಣವೈಭವ ಹೀಗೆ ಹಲವು ವಿಧದಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಾರಿಯ ವಿಶೇಷ ಶ್ರೀ ಕೃಷ್ಣ ಕಥಾಚಿತ್ರ ಸ್ಪರ್ಧೆ ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿರುವುದು.
ಹೆಚ್ಚಿನ ಮಾಹಿತಿಗಾಗಿ ದಯಾನಂದಕಟೀಲು (9448545578) ನವನೀತ್ ಶೆಟ್ಟಿ ಕದ್ರಿ  (9448123061) ಜಾನ್ ಚಂದ್ರನ್ (9844284175) ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *