ಮುಂಬಯಿ: ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಮಾ| ಯಶ್ ಸುರೇಂದ್ರ ಪೂಜಾರಿ ಅವರು ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿ 15ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಒಟ್ಟು 600 ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ಇವರಲ್ಲಿ ವಿಲೇಪಾರ್ಲೆ ಪಶ್ಚಿಮದ ನರ್ಸಿ ಮಾನ್ಜಿ ಇನ್‍ಸ್ಟ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಎನ್‍ಎಂಐಎಸ್) ಕಾಲೇಜಿನ ವಿದ್ಯಾರ್ಥಿಯಾದ ಯಶ್ ಸುರೇಂದ್ರ ಪೂಜಾರಿ ಸರ್ವೋತ್ಕೃಷ್ಟ ದರ್ಜೆಯಲ್ಲಿ ಪಾಸಾಗಿದ್ದಾರೆ.

Yash S.Poojary (BBA) 1
ಯಶ್ ಸುರೇಂದ್ರ ಪೂಜಾರಿ ಮುಂಬಯಿನ ಹೆಸರಾಂತ ಸಮಾಜ ಸೇವಕ, ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಹಳೆಯಂಗಡಿ ಪಾಲಡ್ಕ ಮೂಲದ ಸುರೇಂದ್ರ ಎ.ಪೂಜಾರಿ ಮತ್ತು ಮೂಲ್ಕಿ ದಯಾಶ್ರೀ ಎಸ್.ಪೂಜಾರಿ ದಂಪತಿ ಪುತ್ರನಾಗಿದ್ದಾರೆ.

Yash S.Poojary (BBA)
ಬಿಬಿಎ ವಿದ್ಯಾಭ್ಯಾಸವು ವಾಣಿಜ್ಯ , ಕಲೆ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕ ಪದವಿಯಾಗಿದೆ. ಬಿಬಿಎ ಪ್ರೋಗ್ರಾಮ್  ಸಾಮಾನ್ಯವಾಗಿ ಸಾಮಾನ್ಯ ಅಥವಾ ಸಣ್ಣ ವ್ಯಾಪಾರ, ಶಿಕ್ಷಣ ಮತ್ತು ನಿರ್ದಿಷ್ಟ ಸಾಂದ್ರತೆಗಳಿಗೆ ಮುಂದುವರಿದ ಕೋರ್ಸುಗಳನ್ನು ಒಳಗೊಂಡಿರುತ್ತದೆ.
ಈ ಪದವಿಯನ್ನು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ನಾಲ್ಕು ವರ್ಷಗಳ ಸಂಪೂರ್ಣ-ಸಮಯದ ಅಧ್ಯಯನದ ನಂತರ ನೀಡಲಾಗುತ್ತದೆ. ಅಂತೆಯೇ ಯೂರೋಪ್‍ನಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಮೂರು ವರ್ಷಗಳ ಪೂರ್ಣ-ಸಮಯದ ಅಧ್ಯಯನದ ನಂತರ ಪದವಿಯನ್ನು ನೀಡಲಾಗುತ್ತದೆ.

By suddi9

Leave a Reply

Your email address will not be published. Required fields are marked *