ವಾಮಂಜೂರು: ರಾಮಕೃಷ್ಣ ಮಿಷನ್ ಮಂಗಳೂರು ಆಶ್ರಯದಲ್ಲಿ ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ಹಮ್ಮಿಕೊಂಡಿತು.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಜಾದೂಗಾರ ಕುದ್ರೋಳಿ ಗಣೇಶ್ ಮಕ್ಕಳಿಂದ ಸ್ವಚ್ಚತೆ ಸಾಧ್ಯವೆಂಬುದನ್ನು ವಿಶೇಷ ಜಾದೂ ಮೂಲಕ ತೋರಿಸಿಕೊಟ್ಟರು.

ಆರೋಗ್ಯಕರ ನೀರು, ಅಭ್ಯಾಸ, ಜನ, ಆರೋಗ್ಯಕರ ಸಮಾಜ ನಿರ್ಮಾಣ ನಮ್ಮದಾಬೇಕು. ಆಗಲೇ ನಮ್ಮ ಸುತ್ತಲ ಪರಿಸರ ಸ್ವಚ್ಛತೆಯಿಂದ ಕಂಗೊಳಿಸುವುದು ಎನ್ನುವ ಸಂದೇಶ ಸಾರುವ ಕಾರ್ಯಕ್ರಮ ಇದಾಗಿತ್ತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನ್ಸಿಲ್ಲಾ ಡಿ’ಮೆಲ್ಲೊ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾರು ಉಪಸ್ಥಿತರಿದ್ದರು. ವಿದ್ಯಾಥಿಗಳು ಈ ಜಾದೂವನ್ನು ಕುತೂಹಲದಿಂದ ವೀಕ್ಷಿಸಿದರು. ಸಹಶಿಕ್ಷಕಿ ಚಂಚಲಾಕ್ಷಿ ಕಾರ್ಯಕ್ರಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
