ವಾಮಂಜೂರು:ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ವಾಮಂಜೂರು ಘಟಕದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಏಯ್ಥ್‍ನ ಘಟಕ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇವರಿಂದ ರಕ್ತದಾನ ಶಿಬಿರ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಇವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಭಾನುವಾರ ವಾಮಂಜೂರು ವಿದ್ಯಾಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲಾ ವಠಾರದಲ್ಲಿ ನಡೆಯಿತು.

15vpraktadana shibira
ರಕ್ತದಾನ ಶ್ರೇಷ್ಠದಾನ ರಕ್ತದಾನದಿಂದ ಹಲವು ಜೀವ ಉಳಿಸಬಹುದು ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ರಕ್ತದಾನದ ಮಹತ್ವದ ಬಗ್ಗೆ ವೆನ್‍ಲಾಕ್ ಆಸ್ಪತ್ರೆಯ ರಕ್ತ ಶೇಖರಣದ ವಿಭಾಗದ ಮುಖ್ಯಸ್ಥ ಡಾ. ಶರತ್ ಅವರು ಹೇಳಿದರು. ಊರಿನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಾಡಿಸಿದ ಶೀಬಿರವು ಯಶಸ್ವಿಯಾಗಲಿ ಹಾಗೂ ಎಲ್ಲರೂ ಇದರ ಪ್ರಯೋಜನ ಪಡೆಯಿರಿ ಎಂದು ವಾಮಂಜೂರು ಚರ್ಚಿನ ಪ್ರದಾನ ದರ್ಮಗುರುಗಳು ಹಾಗೂ ಕಥೊಲಿಕ್ ಸಭಾ ವಾಮಂಜೂರು ಘಟಕದ ನಿದೇಶಕರಾದ ವಂದನೀಯ ಸಿಪ್ರಿಯನ್ ಪಿಂಟೊ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

DSCF0308 copy
ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮನು ಜೇಕಬ್ ಇ.ಎಸ್.ಐ ಆಸ್ಪತ್ರೆಯ ಐ.ಸಿ.ಟಿ.ಸಿ ಸಲಹೆದಾರರಾದ ಜಾನೆಟ್ ಕುವೆಲ್ಯೊ, ಧರ್ಮಾಜ್ಯೋತಿ ವಿದ್ಯಾಸಂಸ್ಥೆಯ ಧರ್ಮಭಗಿನಿ ಯಿನಾ ಡಿ ಸೋಜಾ ಶ್ರೀ ಜೈ ಶಂಕರ ಮಿತ್ರ ಮಂಡಳಿಯ ಅಶೋಕ್ ಆಮೀನ್ ಮುಸ್ಲಿಮ್ ಯಂಗ್ ಮೆನ್ಸ್ ಎಸೋಸಿಯೇಶನ್ ಉಪಾಧ್ಯಾಕ್ಷ ಅಬ್ದುಲ್ ಹಕೀಮ್ ಧರ್ಮಗಿರಿ ವಾಳೆಯ ಗುರಿಕಾರ ಸಪುಸಲ್ದಾನಾ ಕ.ಸ. ಅದ್ಯಾಕ್ಷ ಸಿಪ್ಪಿಯನ್ ಮಿನೇಜಸ್ ಹಾಗೂ ವಾಮಂಜೂರು ಘಟಕದ ಮಾನವ ಸಂಪನ್ಮೂಲ ಸಂಚಾಲಕ ರೋಶನ್ ಕಾಮತ್ ವೇದಿಕೆಯಲ್ಲಿ ಹಾಜರಿದ್ದರು.

ಚರ್ಮರೋಗ ಕಣ್ಣು ತಪಾಸಣೆ ರಕ್ತದ ಒತ್ತಡ ಸಕ್ಕರೆ ಖಾಯಿಲೆಯ ಬಗ್ಗೆ ಸಾರ್ವಜನಿಕರು ತಪಸಣೆ ನಡೆಸಿದರು. ವಿದ್ಯಾಜ್ಯೋತಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ದೊಂದಿಗೆ ಪ್ರಾರಂಭಗೊಂಡು ಕಥೋಲಿಕ್ ಸಭಾ ವಾಮಂಜೂರು ಘಟಕದ ಮಾನವ ಸಂಪನ್ಮೂಲ ಸಂಚಾಲಕರಾದ ರೋಶನ್ ಕಾಮತ್ ಸ್ವಾಗತಿಸಿ ಸಪ್ನಾ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ15ವಿಪಿರಕ್ತದಾನಶಿಬಿರ

By Suddi9

Leave a Reply

Your email address will not be published. Required fields are marked *