ವಾಮಂಜೂರು: ಸಾಮಾಜಿಕ ಸೇವೆ ಶಿಕ್ಷಣ ಕ್ರಾಂತಿಯ ಹರಿಕಾರದೇವರ ಸೇವಕ ಪರಮಪೂಜ್ಯ ಫಾ|ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿ ಬೆಳೆಸಿ ವಿಶ್ವದೆಲ್ಲೆಡೆ ವಿಸ್ತರಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನುಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನಲ್ಲಿ “ಕೃತಾರ್ಥ”ಗುರುವಿಗೆ ಭಾವಪೂರ್ಣ ನಮನವನ್ನು ಬಹಳ ಅರ್ಥಪೂರ್ಣವಾಗಿಆಚರಿಸಲಾಯಿತು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಭಗಿನಿ ಸಾಧನಾರವರು, ಬಡವರು, ಶೋಷಿತರು, ಅಸಹಾಯಕರ ಬದುಕಿನಆಶಾಕಿರಣವಾಗಿ ಪೂಜ್ಯರೇಮಂಡರು ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ಮಾರ್ಗದರ್ಶನ, ಆಶೀರ್ವಾದದ ನೆರಳನ್ನು ಪಡೆದ ನಾವೆಲ್ಲರುಧನ್ಯರುಎಂಬುದಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಫಾದರ್‍ರೈಮಂಡರಜೀವನದರ್ಶನವನ್ನು ಪರಿಚಯಿಸುವ ನೃತ್ಯರೂಪಕವನ್ನು ವಿದ್ಯಾರ್ಥಿಗಳು ಅಭಿನಯಿಸಿ ಪೂಜ್ಯಗುರುವಿನ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಸಂಗೀತಕ್ಲಬ್‍ನ ವಿದ್ಯಾರ್ಥಿಗಳು ಗುರುವಿನ ಗುಣಗಾನದೊಂದಿಗೆ ಪ್ರಾರ್ಥನಾಕಾರ್ಯವನ್ನು ನೆರವೇರಿಸಿಕೊಟ್ಟರು. ಈ ಸಂದರ್ಭ ಭಗಿನಿ ಜಾಸ್ಮಿನ್ ಹಾಗೂ ಎಲ್ಲಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಣಾಮ್‍ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ವಂದಿಸಿದರು.
