ಪೊಳಲಿ: ಸರಕಾರಿ ಪ್ರೌಢ ಶಾಲೆ ಪೊಳಲಿ ಇಲ್ಲಿ `ಕೆಸರಿನಲ್ಲಿ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಮನೋರಂಜನಾ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ಪೊಳಲಿಯ ಚೆಂಡಿನ ಗದ್ದೆಯ ಸಮೀಪದ ಗದ್ದೆಯನ್ನು ಹದ ಮಾಡಿ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳೆಲ್ಲಾ ಕೆಸರಿನಲ್ಲೇ ಮಿಂದೇಳುತ್ತಾ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು. ಇದರ ನೇತೃತ್ವವನ್ನು ರೋಟರಿ ಕ್ಲಬ್ ಬಂಟ್ವಾಳ, ಇಂಟರ್ಯಾಕ್ಟ್ ಕ್ಲಬ್ ವಹಿಸಿಕೊಂಡಿತ್ತು. ಮಕ್ಕಳಿಗಾಗಿ ಹಿಮ್ಮುಖ ಓಟ, ಹಗ್ಗಜಗ್ಗಾಟ, ಕಬಡ್ಡಿ, ಓಟ ಮುಂತಾದ ಕ್ರೀಡೆಗಳನ್ನು ಕೆಸರಿನಲ್ಲೇ ಆಡಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಕ್ರಮ ಸಂಜೆ 3.30 ತನಕವೂ ಮುಂದುವರಿದಿತ್ತು. ಮಕ್ಕಳೆಲ್ಲಾ ಕೆಸರಿನಲ್ಲಿ ಮೆತ್ತಿಕೊಂಡು ಆಟವಾಡುತ್ತಿರುವುದನ್ನು ಸ್ಥಳೀಯರು ಕಣ್ತುಂಬಿಕೊಂಡರು.

ಶಾಲೆಯ ಮುಖ್ಯೋಪಾಧ್ಯಾಯರಾದ ಉಮಾ, ರೋಟರಿ ಇಟೆರಾಕ್ಟ್ ಕ್ಲಬ್ ಅಧ್ಯಕ್ಷ ಗಗನ್, ದೈಹಿಕ ಶಿಕ್ಷಕ ಜಯಂತ್ ಆಚಾರ್ಯ, ಚಿತ್ರ ಕಲೆ ಶಿಕ್ಷಕ ಮುರಳಿ ಕೃಷ್ಣ, ಶಿಕ್ಷಕರಾದ ರಂಜಿತಾ, ಪೂರ್ಣಿಮಾ, ಮಂಜುಳಾ ದಯನವೀಣಾ ಮಕ್ಕಳ ಜೊತೆ ಪಾಲ್ಗೊಂಡಿದ್ದರು.

