ಕೈಕಂಬ: ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ಸಭೆಯೊಂದರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಘಟನೆ ಕುಪ್ಪೆಪದವು ಎಂಬಲ್ಲಿ ನಡೆದಿದೆ.
ಕುಪ್ಪೆಪದವು ವಲಯ ಜೆಡಿಎಸ್ ಸಭೆಯಲ್ಲಿ ರಫೀಕ್ ಅಚಚೋರಾ ಮತ್ತು ಅಬ್ದುಲ್ ರಝಾಕ್ ಬ್ಲೂ ಸ್ಟಾರ್ ಎಂಬವರ ನೇತೃತ್ವದಲ್ಲಿ ಅಪಾರ ಸಂಗಡಿಗರು ಪಕ್ಷಕ್ಕೆ ಸೇರಿಕೊಂಡರು.
ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಡಿ.ಪಿ ಹಮ್ಮಬ್ಬ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುಪ್ಪೆಪದವು ಜೆಡಿಎಸ್ ಅಧ್ಯಕ್ಷ ಜಗನ್ನಾಥ ರೈ, ಮುತ್ತೂರು ವಲಯ ಅಧ್ಯಕ್ಷ ಜೋಸೆಫ್ ರೊಸಾರಿಯೋ, ಗ್ರಾ.ಪಂ ಸದಸ್ಯ ಶರೀಫ್ ಕಜೆ, ಚಂದ್ರ ಶೇಖರ, ರಾಜೇಶ್ ಬೆಳ್ಚಡ, ಜಯ ಕಜೆ, ಸುಲೈಮಾನ್, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

